ಬೆಳ್ತಂಗಡಿ: ಪಿ.ಎಂ.ಶ್ರೀ ಮಾದರಿ ಶಾಲೆಗೆ ಡಾ. ನಾರಾಯಣ ಬೇಗೂರು ಭೇಟಿ-ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ

0

ಬೆಳ್ತಂಗಡಿ: ಶಿಕ್ಷಣ ಪ್ರೇಮಿ, ಕೊಡುಗೈ ದಾನಿ ಬೆಂಗಳೂರಿನ ಬೇಗೂರು ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ ಧರ್ಮದರ್ಶಿ ಡಾ. ನಾರಾಯಣ ಬೇಗೂರು ಶಾಲೆಗೆ ಭೇಟಿ ನೀಡಿದರು. ಶಾಲಾ ಪೋಷಕರು ಮತ್ತು ಶಾಲೆಯ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು. ಶಾಲೆಯ ಮೂಲಭೂತ ತುರ್ತು ಅಗತ್ಯತೆಗಳನ್ನು ವಿವರಿಸಿದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಶಾಲೆಯ ಭೌತಿಕ ಅಭಿವೃದ್ಧಿಗೆ ನೆರವು ನೀಡುವ ಭರವಸೆಯನ್ನು ನೀಡಿದರು. ಅವರು ಶಾಲೆಗೆ ಭೇಟಿ ನೀಡುವಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಲಕ್ಷ್ಮೀಶ ದೇವಾಡಿಗ, ವಿಘ್ನೇಶ್ ಆಚಾರ್ಯ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿನಿ, ನಿವೃತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ ಹೆಗ್ಗಡೆ ಅವರು ನಿರಂತರ ಸಂಪರ್ಕ ಹಾಗೂ ಪ್ರಯತ್ನ ನಡೆಸಿರುತ್ತಾರೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಝಮೀರುದ್ದೀನ್, ಉಪಾಧ್ಯಕ್ಷೆ ಆರತಿ ಯರ್ಡೂರು, ಶಾಲಾ ಮುಖ್ಯೋಪಾಧ್ಯಾಯ ಸೂರ್ಯನಾರಾಯಣ ಪುತ್ತೂರಾಯ ಮತ್ತು ಸಮಿತಿಯ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here