






ಅರಸಿನಮಕ್ಕಿ: ಪರ್ಯಾಯ ಸಂಚಾರದಲ್ಲಿರುವ ಶೀರೂರು ವೇದವರ್ಧನ ಸ್ವಾಮೀಜಿ ಬೆಳ್ತಂಗಡಿ ತಾಲೂಕಿನ ಅನೇಕ ಪುಣ್ಯ ಕ್ಷೇತ್ರಗಳ ಸಂದರ್ಶನ ಮಾಡುತ್ತಿದ್ದು ಜ. 2ರಂದು ಅರಸಿನಮಕ್ಕಿ ಗ್ರಾಮದ ಬೂಡುಮುಗೇರು ದೇವಸ್ಥಾನಕ್ಕೆ ಆಗಮಿಸಿದ್ದು ದೇವಳದ ಭಕ್ತರು ಸ್ವಾಮಿಗಳಿಗೆ ಪೂರ್ಣ ಕುಂಭ ಸ್ವಾಗತ ಮಾಡಿದರು.



ಪಟ್ಟದ ದೇವರ ಪೂಜೆ ನಡೆದ ಬಳಿಕ ಮಠದ ದಿವಾನರಾದ ಉದಯ ಕುಮಾರ್ ಕೃಷ್ಣ ಭಕ್ತರಿಗೆ ಕೃಷ್ಣನ ಸಂದೇಶವನ್ನು ನೀಡಿದರು. ಬಳಿಕ ವೇದವರ್ಧನ ಸ್ವಾಮೀಜಿಗಳು ನೆರೆದಿದ್ದ ಅಪಾರ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು. ಆ ಬಳಿಕ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಾಗರಿಕ ಸನ್ಮಾನ ನಡೆಯಿತು.



ಶೀರೂರು ಮಠದ ದಿವಾನರಾದ ಉದಯ ಕುಮಾರ್, ದೇವಳದ ಅನುವಂಶಿಯ ಆಡಳಿತ ಮೊಕ್ತೇಸರ ರಾಜಗೋಪಾಲ್ ಪೆರಡೇಲು, ನಾಗರಿಕ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಕಾರ್ಯಕ್ರಮದ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಮಧುಕರ್ ರಾವ್ ಮಚ್ಚಳೆ, ಸಮಿತಿ ಸದಸ್ಯರು, ಹಾಗೂ ಊರಿನ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.









