ಶಿಶಿಲ: ಕಳೆದು ಹೋದ ಪರ್ಸ್ ಹಿಂದಿರುಗಿಸಿ ಮಾನವೀಯತೆ ಮೆರದ ಕೊರಗಪ್ಪ ಗೌಡ

0

ಶಿಶಿಲ: ಬಸ್ ಸ್ಟ್ಯಾಂಡ್ ಬಳಿ ಕುಳಿತಿದ್ದ ಶಿಶಿಲದ ಪಿತ್ತಿಲ್ ನಿವಾಸಿ ಕಮಲ ಅವರು ಪರ್ಸ್ ಮರೆತು ಹೋಗಿದ್ದರು. ಇದನ್ನು ಗಮನಿಸಿದ ಪಾದಚಾರಿ ಒಬ್ಬರು ಪಕ್ಕದಲ್ಲೇ ಇರುವ ಕೊರಗಪ್ಪ ಗೌಡರ ಅಂಗಡಿಗೆ ತಲುಪಿಸಿದ್ದು, 3ದಿನದಿಂದ ಪರ್ಸ್ ನಲ್ಲಿ ಇದ್ದ ನಂಬರ್ ಒಂದಕ್ಕೆ ಕರೆ ಮಾಡಿ ವಿಷಯ ತಿಳಿಸಲು ಯತ್ನಿಸಿದ್ದರು. ಕರೆ ಸ್ವೀಕರಿಸದ ಹಿನ್ನೆಲೆ ಆ ನಂಬರ್ ಗೆ ಶಿಶಿಲ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ನಿರಂತರ ಕರೆ ಮಾಡಿದಾಗ ಕರೆ ಸ್ವೀಕರಿಸಿ ಮಾತನಾಡಿದ್ದು ಬಳಿಕ ಪರ್ಸ್ ಕಳೆದುಕೊಂಡಿದ್ದ ಕಮಲ ಅಂಗಡಿಗೆ ಆಗಮಿಸಿ ಪರ್ಸ್ ಪಡೆದುಕೊಂಡಿದ್ದಾರೆ. ಪರ್ಸ್ ನಲ್ಲಿ ರೂ 9,500 ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here