







ಬೆಳ್ತಂಗಡಿ: ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಹಾಗೂ ಬೆಳ್ತಂಗಡಿ ತಾಲೂಕು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಸ್ವಜಾತಿ ಭಾಂದವರ ಸಿಂಧೂರ ಟ್ರೋಫಿ ಇದರ ಉದ್ಘಾಟನೆಯನ್ನು ನಡುಬೊಟ್ಟು ಇದರ ಧರ್ಮದರ್ಶಿ ಎನ್. ರವಿ ಅವರು ಡಿ. 28ರಂದು ನೆರವೇರಿಸಿದರು.



ಅಧ್ಯಕ್ಷತೆಯನ್ನು ತಾಲೂಕು ಸಂಘದ ಉಪಾಧ್ಯಕ್ಷ ಪದ್ಮ ಕುಮಾರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ನವಶಕ್ತಿ ಶಶಿಧರ್ ಶೆಟ್ಟಿ ಬರೋಡರವರು ಕುಲಾಲ ಸಮುದಾಯ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲಿ ಅವಶ್ಯಕತೆ ಇರುವ ಸಮುದಾಯ ಅಂತ ಹೇಳುತ್ತಾ ಭವನ ನಿರ್ಮಾಣಕ್ಕೆ ರೂ. 2.00 ಲಕ್ಷ ನೀಡುವುದಾಗಿ ಹೇಳಿದರು.

ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಹರೀಶ್ ಕಾರಿಂಜ, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಶೆಟ್ಟಿ, ವಿಜಯ ಕೋ ಆಪರೇಟಿವ್ ಸೊಸೈಟಿನ ಅಧ್ಯಕ್ಷ ಅಜಿತ್ ಕೊರ್ಯಾರು, ರಾಜೇಶ್ ಶೆಟ್ಟಿ ನವಶಕ್ತಿ, ಯುವ ವೇದಿಕೆ ಅಧ್ಯಕ್ಷರಾದ ಅವಿನಾಶ್ ಮಾಣೂರು, ಲೋಕೇಶ್ ಕುಲಾಲ್, ಉಮೇಶ್ ಕುಲಾಲ್, ಹೊನ್ನಪ್ಪ ಮೂಲ್ಯ ಮಾಣೂರು, ಯತೀಶ್ ಸಿರಿಮಜಲ್, ಮೋಹನ್ ಕಂಚಿಂಜ ಯುವ ವೇದಿಕೆಯ ಕಾರ್ಯದರ್ಶಿ ತಿಲಕ್ ರಾಜ್ ಉಪಸ್ಥಿತರಿದ್ದರು.









