






ಶಿಬಾಜೆ: ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಪೆರಡೇಲು ಶ್ರೀಕರ ದಾಮ್ಲೆ ಮನೆಯವರು ಡಿ. 27ರಂದು ರಜತ ಪಾದುಕೆಯನ್ನು ಸಮರ್ಪಿಸಿದರು. ಶ್ರೀ ದೇವಿಗೆ ಇದುವರೆಗೆ ಪಾದುಕಾ ಆಭರಣ ಇರಲಿಲ್ಲ ಈಗ ಪಾದುಕ ಆಭರಣ ದೇವಿಗೆ ಸಮರ್ಪಣೆ ಆಗಿರುವುದರಿಂದ ಭಕ್ತರು ಮತ್ತು ದೇವಾಲಯದ ಆಡಳಿತ ಮಂಡಳಿ ಅರ್ಚಕರು, ಸಂತೋಷಪಟ್ಟಿದ್ದಾರೆ.


ರಜತ ಪಾದುಕೆಯನ್ನು ಕಾಣಿಕೆಯಾಗಿ ನೀಡಿದ ಶ್ರೀಕರ ದಾಮ್ಲೆ ಮತ್ತು ಮನೆಯವರಿಗೆ ದೇವಳದ ವತಿಯಿಂದ ಕೃತಜ್ಞತೆ ಸಮರ್ಪಸುತ್ತಿದ್ದೇವೆ ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಮತ್ತು ಸಮಿತಿ ಸದಸ್ಯರು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.









