






ಗರ್ಡಾಡಿ: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಗರ್ಡಾಡಿ ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಡಿ. 23ರಂದು ಆಯೋಜಿಸಲಾಗಿತ್ತು. ಸಂತ ಸೆಬಾಸ್ಟಿಯನ್ ಚರ್ಚಿನ ಪ್ರಧಾನ ಧರ್ಮಗುರು ಸ್ವಾಮಿ ಸುದೀಪ್ ಸಂತಾನ್ ಗೊನ್ಸಾಲ್ವಿಸ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ಕ್ರಿಸ್ತ ಜಯಂತಿ ನಾವು ಡಿ. 25 ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಭೂಲೋಕಕ್ಕೆ ಬಂದು ತುಂಟರನ್ನು, ಕಿವುಡರನ್ನು, ರೋಗ ಪೀಡಿತರನ್ನು, ಮರಣದ ಆಸನದಲ್ಲಿ ಇದ್ದವರನ್ನು ಎಲ್ಲಾರನ್ನೂ ಗುಣಪಡಿಸಿದರು. ಈ ಕ್ರಿಸ್ಮಸ್ ಹಬ್ಬ ಬೆಳಕಿನ ಹಬ್ಬ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು ಎಂದು ಹೇಳಿದರು.



ಹಸನಬ್ಬ ನಬೀಸಾ ಮರಕ್ಕಿನ, ಪ್ರವೀಣ ಪೂಜಾರಿ ಹಲ್ಲಿಂಜ, ಯಮುನಾ ಬೊಲ್ಲಾಜೆ, ಅಮೀನ್ ಅಮ್ಮ ಅಹಮದ್ ನಂದಿಬೆಟ್ಟ ಅವರನ್ನು ಭೇಟಿಮಾಡಿ ಶಾಲು ಹೊದಿಸಿ, ಅಕ್ಕಿ, ಬ್ಲಾಂಕೇಟ್, ಕ್ರಿಸ್ಮಸ್ ಸ್ಟೀಟ್ಸ್ ಹಾಗೂ ಧನ ಸಹಾಯ ಮಾಡಿ ಈ ಕ್ರಿಸ್ಮಸ್ ಹಬ್ಬ ಬೆಳಕಿನ ಹಬ್ಬ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು ಎಂದು ಧರ್ಮಗುರುಗಳು ಹಾರೈಸಿದರು.
ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಅಲ್ಬರ್ಟ್ ಸುನಿಲ್ ಮೋನಿಸ್ ಹಾಜರಿದ್ದರು. ಗರ್ಡಾಡಿ ಘಟಕದ ಅಧ್ಯಕ್ಷ ಓಲ್ವಿನ್ ಮೋನಿಸ್, ಕಾರ್ಯದರ್ಶಿ ಸ್ಟೀವನ್ ಮೋನಿಸ್, ಹಣಕಾಸು ಜ್ಯೋತಿ ಕ್ಲೀಟಾ ಡೇಸಾ, ಡೆನಿಸ್ ಅಮನ್ ಫರ್ನಾಂಡಿಸ್, ಮೆಲ್ವಿನ್ ಸಿಕ್ವೇರಾ, ಲಿಯೋ ಸಿಕ್ವೇರಾ ಹಾಗೂ ಜೋನ್ ಮೋನಿಸ್ ಹಾಜರಿದ್ದರು.









