







ಬೆಳ್ತಂಗಡಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ 16ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಣೀಕ್ ಕಿನ್ನಿಗೋಳಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ.
ಅತೀ ಹೆಚ್ಚು ಕ್ರಿಶ್ಚಿಯನ್ ಮತದಾರರನ್ನು ಹೊಂದಿರುವ ಈ ವಾರ್ಡ್‌ನಲ್ಲಿ, ಜಾತಿ-ಧರ್ಮದ ಭೇದ ಮರೆತು ಜನತೆ ಶಾಸಕ ಜನ ಸೇವಕ ಉಮಾನಾಥ್ ಕೋಟ್ಯಾನ್ ರವರು ಮಾಡಿದ ಅಭಿವೃದ್ಧಿಗೆ ಮತ ನೀಡಿದ್ದಾರೆ. ಕ್ರಿಶ್ಚಿಯನ್ ಸಮುದಾಯವು ಬಿಜೆಪಿಯ “ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಮಂತ್ರ ಮತ್ತು ಪ್ರಧಾನಿ ಮೋದಿಯವರ ಅಭಿವೃದ್ಧಿ ಪರ ಚಿಂತನೆಗೆ ನೀಡಿದ ಸ್ಪಷ್ಟ ಜನಾದೇಶ ಇದಾಗಿದೆ.


ವಿಶೇಷವಾಗಿ ವಾರ್ಡ್ ನಂಬರ್ 16ರಲ್ಲಿ ಸುಮಾರು 700ಕ್ಕಿಂತ ಅಧಿಕ ಕ್ರೈಸ್ತ ಮತದಾರರು ಮತ್ತು ಸುಮಾರು 300ಮಂದಿ ಹಿಂದೂ ಮತದಾರರು ಇರುವಂತಹ ವಾರ್ಡಿನಲ್ಲಿ ಕ್ರೈಸ್ತ ಸಮುದಾಯದ ವಿಶ್ವಾಸವನ್ನು ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯ ಮುಖಾಂತರ ತನ್ನ ವಿದ್ಯಾರ್ಥಿ ಜೀವನವನ್ನು ಪ್ರಾರಂಭಿಸಿ, ಉನ್ನತ ವ್ಯಾಸಂಗವನ್ನು ಮಾಡಿ, ಎಂಬಿಎ ಎಂಬ ಪದವಿಯನ್ನು ಪಡೆದು ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದ ಮೇಲೆ ಸಾಮಾನ್ಯ ಕಾರ್ಯಕರ್ತನಿಂದ, ಬೂತ್ ಸಮಿತಿ ಅಧ್ಯಕ್ಷ, ಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ, ಯುವ ಮೋರ್ಚ ಜಿಲ್ಲಾ ಕಾರ್ಯದರ್ಶಿಯಾಗಿ, ಮಂಡಲ ಕಾರ್ಯದರ್ಶಿಯಾಗಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚದ ಅಧ್ಯಕ್ಷರಾಗಿ, ಪ್ರಸ್ತುತ ರಾಜ್ಯ ಉಪಾಧ್ಯಕ್ಷರಾಗಿ ಹೀಗೆ ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ತನ್ನ ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡು 2019ರಲ್ಲಿ ಮಡಂತ್ಯಾರಿನಲ್ಲಿ ನಡೆದ ಕೆತೊಲಿಕ್ ಸಮಾವೇಶದ ಸಂಚಾಲಕರಾಗಿ ಸುಮಾರು 30 ಸಾವಿರಕ್ಕಿಂತ ಅಧಿಕ ಕೆಥೋಲಿಕರನ್ನು ಸೇರಿಸುವಲ್ಲಿ ಯಶಸ್ವಿಯಾದ ಸಂಘಟನಾ ಚತುರ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರು, ಜಿಲ್ಲಾ ಪ್ರಭಾರಿ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜೋಯಲ್ ಮೆಂಡೋನ್ಸ ಅವರ ಚಮತ್ಕಾರ, ತಂತ್ರಗಾರಿಕೆಯಿಂದ ಜಯ ತರುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಕ್ರೈಸ್ತ ಸಮುದಾಯದವರು ಭಾರತೀಯ ಜನತಾ ಪಾರ್ಟಿಯ ಬೆಂಬಲಿಸುವಂತಹ ಮುನ್ಸೂಚನೆ ಕಿನ್ನಿಗೋಳಿಯ ಪಟ್ಟಣ ಪಂಚಾಯತ್ ಚುನಾವಣೆಯ ಮುಖಾಂತರ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಜೋಯಲ್ ಮೆಂಡೊನ್ಸರ್ ಅವರ ಈ ತಂತ್ರಗಾರಿಕೆ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಭಾರತಿಯ ಜನತಾ ಪಕ್ಷದ ಪ್ರಮುಖರಿಂದ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರ ತಂಡದಲ್ಲಿ ಮಂಡಲ ಪ್ರಭಾರಿಗಳಾದ ಗ್ಲೆನ್ ವಿಶಾಲ್ ಡಿಸಿಲ್ವಾ ಮೂಡುಬಿದಿರೆ, ಜೋಯ್ಸನ್ ಡಿಸೋಜಾ ನೀರುಡೆ, ಸ್ಟ್ಯಾನಿ ಪಿಂಟು, ರೂಬೆನ್ ಡಿಸೋಜಾ, ಸಚಿನ್ ರೋಜಾರಿಯೋ, ಗ್ರಾಮ ಪಂಚಾಯತ್ ಸದಸ್ಯ ಅನಿತಾ ಡಿಕೋಸ್ಟ ಅವರು ಸಹಕರಿಸಿದರು.









