






ಬೆಳ್ತಂಗಡಿ:ಪ್ರಧಾನಮಂತ್ರಿಗಳ ಮಹತ್ವಕಾoಕ್ಷಿ ಕಾರ್ಯಕ್ರಮವಾದ ಸಂಸದ್ ಕ್ರೀಡಾ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಹೂವಿನ ಬೃಹದಾಕಾರದ 8ಫೀಟ್ ಉದ್ದದ ರಂಗೋಲಿಯನ್ನು ಕೇವಲ 1ಗಂಟೆ 39ನಿಮಿಷದಲ್ಲಿ ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ, 2025 ಅಕ್ಟೊಬರ್ 9ರಂದು ಪುನಃ ರಂಗೋಲಿ ನಿರ್ಮಿಸುವುದರಲ್ಲಿ ಏಷಿಯ ಬುಕ್ ಆಫ್ ರೆಕಾರ್ಡ್ ಸಾಧನೆ ಗೈದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಶೇಖರ್ ಶೆಟ್ಟಿ ಹಾಗೂ ಶಾರದಾ ದಂಪತಿಗಳ ಪುತ್ರಿ ಶ್ರದ್ದಾ ಶೆಟ್ಟಿ ಏಣಿಂಜೆ ಅವರನ್ನು ಸನ್ಮಾನಿಸಲಾಯಿತು.


ಬ್ರಿಜೇಶ್ ಚೌಟ ರವರ ಮತ್ತು ಪ್ರಧಾನಿ ಮೋದಿಯವರ ಮೊದಲ ಭೇಟಿಯ ಭಾವಚಿತ್ರವನ್ನು ಶ್ರದ್ದಾ ತನ್ನ ಕೈಚಳಕದಿಂದ ಚಿತ್ರಿಸಿ ಸಂಸದರಿಗೆ ಉಡುಗೊರೆಯಾಗಿ ನೀಡಿದರು.
ಈ ಸಂಧರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.









