ಮಲವಂತಿಗೆ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ – ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಮಟ್ಟಕ್ಕೆ 39 ಪಂಚಾಯತ್ ಪೂರ್ಣ – ದಿಡುಪೆ – ಎಳೆನೀರು ರಸ್ತೆ ಪೂರ್ಣಗೊಳಿಸಿ: ಗ್ರಾಮಸ್ಥರ ಒತ್ತಾಯ

0

ಬೆಳ್ತಂಗಡಿ: ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಜನರ ಬಳಿಗೆ ಬಂದು ಸಮಸ್ಯೆ ನಿರ್ವಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. 38ನೇ ಜನಸ್ಪಂದನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದೇನೆ. ಎಲ್ಲಾ ಗ್ರಾಮ ಪಂಚಾಯಿತಿನಲ್ಲಿಯೂ ನಡೆಯಲಿದೆ. ರಾಜ್ಯದ ಮೊದಲ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ಅವರು ಡಿ. 26 ರಂದು ನಡೆದ ಮಲವಂತಿಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂಡಾಜೆ – ಕಜಕ್ಕೆ ರಸ್ತೆ ದುರಸ್ತಿಗೊಳಿಸಬೇಕು ಹಾಗೆಯೇ ಕಾಜೂರು-ಕಜಕ್ಕೆ ರಸ್ತೆ ಕಿರಿದಾಗಿದ್ದು ಅಗಲೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಹೇಳಿದರು.

ಡಿಡುಪೆ – ಎಳನೀರು ಮುಂದುವರಿದ 5 ಕಿಮೀ ರಸ್ತೆಯನ್ನು ನಿರ್ಮಾಣಗೊಳಿಸಬೇಕು. ಈಗಾಗಲೇ 3 ಕಿಮೀ ರಸ್ತೆ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಈಗಾಗಲೇ ಪಂಚಾಯತ್‌ ಮಟ್ಟದಲ್ಲಿ ಸಭೆ ನಡೆಸಲಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಹಲವಾರು ಬಾರಿ ಈ ರಸ್ತೆಯ ನಿರ್ಮಾಣದಲ್ಲಿ ಪ್ರಯತ್ನಿಸುತ್ತಿದ್ದೇನೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಅಧಿಕಾರಿಗಳು ಸ್ಪಂದನೆ ನೀಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.

ಅರಣ್ಯದಂಚಿನದಲ್ಲಿರುವ ಕರಿಯಾಲು ಭಾಗದಲ್ಲಿ 10ಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಇಲಾಖೆಯಲ್ಲಿ ಕಡತದ ಪರಿಶೀಲನೆ ಹಂತದಲ್ಲಿದೆ ಎಂದು ಶಾಸಕರು ತಿಳಿಸಿದರು. ಬಂಗಾರಪಲ್ಕೆ ಎಂಬಲ್ಲಿ 10 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಮೆಸ್ಕಾಂ ಇಲಾಖೆಗೆ ಶಾಸಕರು ಸೂಚಿಸಿದರು. ಎಳನೀರು, ಗುತ್ಯಡ್ಕ ಭಾಗದಲ್ಲಿ ಕಳೆದ 75 ವರ್ಷಗಳಿಂದ ವಿದ್ಯುತ್ ಸೌಲಭ್ಯ ಕಾಣದ ನಮಗೆ ಬೆಳಕು ಹರಿಸಿದ್ದು ಶಾಸಕ ಹರೀಶ್ ಪೂಂಜ ಎಂದು ಗ್ರಾಮಸ್ಥರು ಅವರನ್ನು ಅಭಿನಂದಿಸಿದರು.

ರಸ್ತೆ ಅಭಿವೃದ್ಧಿ ಅವಕಾಶ ಕಲ್ಪಿಸಿವುದಾದರೆ ಸೂಕ್ಷ್ಮವಲಯ ಅರಣ್ಯಕ್ಕೆ ಸಮ್ಮತ ಸೂಚಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು. ಅರಣ್ಯ ಇಲಾಖೆಯ ಪ್ರವಾಸಿ ತಾಣಕ್ಕೆ ಸುಂಕ ವಸೂಲಿ ಮಾಡಲಾಗುತ್ತಿದೆ ಆದರೆ ಇದರಿಂದ ಪಂಚಾಯತ್ ಗೆ ಯಾವುದೇ ಲಾಭವಿಲ್ಲ, ಸ್ವಲ್ಪ ಅಂಶವನ್ನು ಪಂಚಾಯತ್ ಅಭಿವೃದ್ಧಿಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿದಾಗ ಈ ಪ್ರಕ್ರಿಯೆ ಸರ್ಕಾರ ಹಂತದಲ್ಲಿ ಆಗಬೇಕು, ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಶಾಸಕರು ತಿಳಿಸಿದರು. ಅಲ್ಲದೇ ಪ್ರವಾಸಿ ತಾಣ ನೇತ್ರಾವತಿ ಪೀಕ್ ಪ್ರವೇಶಿಸಿಸಲು ಪಂಚಾಯತ್ ರಸ್ತೆ ಬಳಕೆಯಾಗುತ್ತದೆ ಇದಕ್ಕೆ ಅನುಗುಣವಾಗಿ ಪಂಚಾಯತ್ 100 ರೂ ಸುಂಕ ವಸೂಲಿ ಮಾಡಬೇಕು ಈ ಬಗ್ಗೆ ಐಬಿಯಲ್ಲಿ ತಹಶೀಲ್ದಾ‌ರ್, ಇಓ, ಆ‌ರ್ ಎಫ್ ಓ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕರು ಹೇಳಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ, ಪಂಚಾಯತ್ ಅಧ್ಯಕ್ಷ ಪ್ರಕಾಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ, ಅರಣ್ಯಧಿಕಾರಿ ತ್ಯಾಗರಾಜ್, ಪಂಚಾಯತ್ ಉಪಾಧ್ಯಕ್ಷೆ ರೋಹಿಣಿ ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here