ಲಾಯಿಲ: ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮ – ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಮಟ್ಟಕ್ಕೆ 37 ಪಂಚಾಯತ್ ಪೂರ್ಣ – 3 ಅಕ್ರಮ ಕಟ್ಟಡ, ನ್ಯಾಯಬೆಲೆ ಅಂಗಡಿ ಬಗ್ಗೆ ಚರ್ಚೆ

0

ಬೆಳ್ತಂಗಡಿ: ಕಳೆದ ಅವಧಿಯಲ್ಲಿ 21 ಕೋಟಿ ಅನುದಾನವನ್ನು ಲಾಯಿಲ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ ನೀಡಿದ್ದೇನೆ. 158 ಸರ್ವೆ ನಂ ನಲ್ಲಿ ಮನೆ ಇದೆ. ವಿದ್ಯುತ್ತು ಸಂಪರ್ಕ ಡೋರ್ ನಂಬರ್, ಮನೆ ತೆರಿಗೆ ಎಲ್ಲಾ ಇದೆ. ಹಕ್ಕುಪತ್ರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದರು. ವಸಂತ ಬಂಗೇರ ಇವರ ಅವಧಿಯಲ್ಲಿ ಅದೇ ಸರ್ವೆ ನಂ ನಲ್ಲಿ ಅಕ್ರಮ- ಸಕ್ರಮ, 94ಸಿ ಎಲ್ಲಾ ಆಗಿದೆ. ಇವಾಗ ಯಾಕೆ ಮಾಡಲ್ಲ?ಎಂದು ಸಾರ್ವಜನಿಕರು ಕೇಳಿದಾಗ ಇದಕ್ಕೆ ಉತ್ತರಿಸಿದ ಶಾಸಕರು ಬ್ರೋಕರ್ ಗಳ ಮುಕಾಂತರ ಇದು ನಡೆದಿದೆ. ಇದರಿಂದ ಜನರಿಗೆ ಇವಾಗ ಸಮಸ್ಯೆ ಉಂಟಾಗುತ್ತಿದೆ ಎಂದರು. ಜಂಟಿ ಸರ್ವೆ ನಡೆಸಿ ಇದರ ಬಗ್ಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವ ಎಂದರು.

ರಸ್ತೆ, ಚರಂಡಿ, ತಡೆಗೋಡೆ ಬಗ್ಗೆ ಸಾರ್ವಜನಿಕರು ಸಮಸ್ಯೆ ತಿಳಿಸಿದಾಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದರು. ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಜನರ ಬಳಿಗೆ ಬಂದು ನಿರ್ವಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. 37ನೇ ಜನಸ್ಪಂದನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದೇನೆ. ಎಲ್ಲಾ ಗ್ರಾಮ ಪಂಚಾಯಿತಿನಲ್ಲಿಯೂ ನಡೆಯಲಿದೆ. ರಾಜ್ಯದ ಮೊದಲ ಬಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ಅವರು ಡಿ.26 ರಂದು ಲಾಯಿಲ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

3 ಅಕ್ರಮ ಕಟ್ಟಡ ಇದೆ. ಆದರೆ ಪಂಚಾಯತ್ ನಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನ್ಸರ್ ಹೇಳಿದಾಗ, ಪಂಚಾಯತ್ ಮತ್ತು ಕಂದಾಯ ಇಲಾಖೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಜನ ಸಾಮಾನ್ಯರಿಗೆ ನೀಡುವ ಅಕ್ಕಿಯಲ್ಲಿ ತೂಕ ಮಾಪನ ಸರಿ ಇಲ್ಲದ ಕಾರಣ 2 ಕೆಜಿ ವರೆಗೆ ಅಕ್ಕಿ ಕಡಿಮೆಯಾಗುತಿದೆ ಎಂದು ಪ್ರಸಾದ್ ತಿಳಿಸಿದರು. ಇದಕ್ಕೆ ಡಿಜಿರಲ್ ಮಾಪನ ಮಾಡುವಂತೆ ಒತಾಯಿಸಿದರು.

ಹಲವು ಗ್ರಾಮಗಳಲ್ಲಿರುವ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಲ್ಲುಸಲು ಆಗುವುದಿಲ್ಲ ಎಂದಾದರೆ ಕಾನೂನಿನ ಪರಿಧಿಯಲ್ಲಿ ತಹಶೀಲ್ದಾ‌ರ್ ಇಓ ಕಾರ್ಯನಿರ್ವಹಿಸುದಿಲ್ಲ, ಅಧಿಕಾರಿಗಳು ಮುತುವರ್ಜಿ ವಹಿಸುವುದಿಲ್ಲ, ಅರಣ್ಯ ಇಲಾಖೆ ತಮ್ಮ ಜಾಗವನ್ನು ಒತ್ತುವರಿ ನಡೆಸಿದರೆ ತೆರವು ಗೊಳಿಸುತ್ತಾರೆ ಯಾಕೆ ನಿಮಗೆ ಆಗುವುದಿಲ್ಲ. ಅಧಿಕಾರಿಗಳು ಪಕ್ಷ ರಹಿತವಾಗಿ ಕರ್ತವ್ಯ ನಿರ್ವಹಿಸಬೇಕು. ಅನಧಿಕೃತ ಕಟ್ಟಡಗಳನ್ನು ಯಾರು ನಿಲ್ಲಿಸುವುದಿಲ್ಲ ಎಂದಾದರೆ ನಾನು ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಪ್ರಶ್ನಿಸುತ್ತೇನೆ ಅವರು ಉತ್ತರಿಸಲಿ. ಪಂಚಾಯತ್ ನಿಂದ ಎನ್ ಓಸಿ ನೀಡದೆ ಕೊರೆಸಿದ ಕೊಳವೆಬಾವಿಯನ್ನು ಪಂಚಾಯತ್‌ ವಶಪಡಿಸಬೇಕು ಮತ್ತು ಅನಧಿಕೃತ ಕಟ್ಟಡ ಕುರಿತು ಹೈ ಕೋರ್ಟ್ ಹೋಗಿ ಎಂದು ಶಾಸಕರು ತಿಳಿಸಿದರು.

ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಹಾಗೂ ಪಂಚಾಯತ್‌ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಶಾಸಕರು ಪ್ರಯತ್ನಿಸಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ವಿನಂತಿಸಿದರು. ನ್ಯಾಯಬೆಲೆ ಅಂಗಡಿಯನ್ನು ಪಂಚಾಯತ್ ಕಟ್ಟಡಕ್ಕೆ ವರ್ಗಾಯಿಸಬೇಕು ಎಂದು ಗ್ರಾಮಸ್ಥರು ಹೇಳಿದಾಗ ನ್ಯಾಯ ಬೆಲೆ ಅಂಗಡಿಯನ್ನು ವರ್ಗಾಯಿಸುವಾಗ ಟಿಎಂಪಿಎಸ್ ಆಡಳಿತ ಮಂಡಳಿಗೆ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ ಎಂದು ಅವರಿಗೆ ಸೂಚನೆ ನೀಡಬೇಕು ಎಂದು ಶಾಸಕರು ತಿಳಿಸಿದರು. ಇಂಡಿಯನ್ ಅಡುಗೆ ಅನಿಲವನ್ನು ಹೊರ ಗ್ರಾಮದವರು ಹೋಲ್ ಸೇಲ್ ಆಗಿ ಖರೀದಿಸಿ ಕೊಂಡು ಹೋಗುತ್ತಿದ್ದಾರೆ ಇದರಿಂದ ಲಾಯಿಲ ಗ್ರಾಮದರಿಗೆ ಸಿಲಿಂಡ‌ರ್ ಸಿಗುತ್ತಿಲ್ಲ, ಕಲ್ಕಣಿ ನ್ಯಾಯ ಬೆಲೆ ಅಂಗಡಿಯಲ್ಲಿ ಡಿಜಿಟಲ್ ತೂಕ ಮಾಪನ ಇಲ್ಲ ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಆಹಾರ ಇಲಾಖೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಲಾಡಿ ಶಾಲೆಯಲ್ಲಿ ಟೀಚರ ಸಮಸ್ಯೆ ವ್ಯಾಪಕವಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಕುಡಿಯುವ ನೀರು ನಮಗೆ ಇಲ್ಲ ಎಂದು ಗ್ರಾಮಸ್ಥೆಯೊಬ್ಬರು ಹೇಳಿದಾಗ ಜೆಜೆಎಂ ಯೋಜನೆಯೊಳಗೆ 15 ದಿನದಲ್ಲಿ ಸಂಪರ್ಕ ಕಲ್ಪಿಸುವುದಾಗಿ ಎಂದು ಶಾಸಕರು ತಿಳಿಸಿದರು. ಪಟ್ಟಾಡಿ ಎಂಬಲ್ಲಿ ಜೆಜೆಎಂ ಕೊಳವೆ ಬಾವಿಗೆ ವಾಹನ ಗುದ್ದಿ ಹೊಡೆದು ಹೋಗಿದೆ ಟ್ಯಾಂಕ್ ಗಳ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಕಾಮಗಾರಿ ಸಮರ್ಪಕವಾಗಿ ನಡೆಸದಿದ್ದಲ್ಲಿ ಗ್ರಾಮ ಪಂಚಾಯತ್ ಹಸ್ತಾಂತರ ತೆಗೆದುಕೊಳ್ಳಬಾರದು ಎಂದು ಶಾಸಕರು ತಿಳಿಸಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ, ಪಂಚಾಯತ್ ಅಧ್ಯಕ್ಷೆ ಜಯಂತಿ.ಎಂ.ಕೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಸಹಿತ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here