ಡಿ. 25-31: ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ವಾರ್ಷಿಕ ರಥೋತ್ಸವ

0

ಬೆಳ್ತಂಗಡಿ: ಬಂಗ್ವಾಡಿ ಶ್ರೀ ಶಾಂತಿನಾಥ ಸ್ವಾಮಿ ಬಸದಿ ವಾರ್ಷಿಕ ರಥೋತ್ಸವವು ಕಾರ್ಕಳ ದಾನಶಾಲಾ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಡಿ 25 ರಿಂದ 31 ರವರೆಗೆ ನೆರವೇರಲಿರುವುದು.

ಡಿ.25 ರಂದು ತೋರಣ ಮುಹೂರ್ತ, ವಿಮಾನ ಶುದ್ದಿ, ಯಕ್ಷ ರಾಧನೆ, ಧ್ವಜಾರೋಹಣ, ನಿತ್ಯವಿದಿ ಸಹಿತ ಚಿರಭಿಷೇಕ ಹಾಗೂ ಸಂಜೆ 6 ಕ್ಕೆ ಶ್ರೀ ಕ್ಷೇತ್ರಪಾಲ ದೇವರಿಗೆ ಆರಾಧನಾ ಪೂರ್ವಕ ಕಲಾರೋಪಣೆ ನಡೆಯಲಿದೆ. ಡಿ.26 ರಂದು ನಾಂದಿಮಂಗಲ, ಮೃತ್ತಿಕ ಸಂಗ್ರಹಣ, ಅಂಕುರಾರ್ಪಣೆ, ಭೇರಿತಾಡನ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಲಿದೆ. ಡಿ. 27 ವಾಸ್ತು ಶಾಂತಿ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಲಿದೆ. ಡಿ.28ರಂದು ದರ್ಶನಬಲಿ, ರಥಾರೋಹಣ, ಮಹಾನೈವೇದ್ಯ ಪೂಜೆ ಸಂಘ ಸಂತರ್ಪಣೆ ರಾತ್ರಿ 9 ರಿಂದ ಮಹಾರಾಥೋತ್ಸವ ಶ್ರೀ ಶಾಂತಿನಾಥ ಸ್ವಾಮಿ ಸನ್ನಿದಿಯಲ್ಲಿ 108 ಕಲಶ ಮಹಾಭಿಷೇಕ ನಡೆಯಲಿರುವುದು, ಡಿ. 31ರಂದು ಮುಡಿ ಅಕ್ಕಿ ಪೂಜೆ ಜರಗಲಿರುವುದು ಎಂದು ಬಂಗ್ವಾಡಿ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here