ಡಿ. 28: ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಮರಾಟಿ ಸಂಭ್ರಮ-2025

0

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಮರಾಟಿ ಸಂಭ್ರಮ 2025 ಪುತ್ತೂರಿನ ತೆಂಕಿಲ ಬೈಪಾಸ್ ರಸ್ತೆಯ ಸ್ವಾಮಿ ಕಲಾಮಂದಿರ ಡಿ. 28ರಂದು ಬೆಳಿಗ್ಗೆ 9.00ಗಂಟೆಯಿಂದ ನಡೆಯಲಿದೆ.

ಬೆಳಿಗ್ಗೆ ಗಂಟೆ 9.00ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,10.00ರಿಂದ ಕುಣಿತ ಭಜನೆ, 11.00ರಿಂದ ವಧುವರರ ವಿಚಾರಗೋಷ್ಠಿ ಮಧ್ಯಾಹ್ನ 11.45ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭೋಜನ ನಡೆಯಲಿದೆ. ಅಪರಾಹ್ನ 1.45ರಿಂದ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ – ಪ್ರತಿಭಾ ಪುರಸ್ಕಾರ, ಸಾಧಕರಿಗೆ, ದಾನಿಗಳಿಗೆ ಸನ್ಮಾನ, ಮರಾಟಿ ವಧು – ವರರ ಸಮಾನ್ವೇಷಣೆ, ಮರಾಟಿ ನೆರವು ಅನಾವರಣ ನಡೆಯಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 3.30ರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ವಿಮಲಾ‌ ಮಹಾಲಿಂಗ ನಾಯ್ಕ, ಸಂಚಾಲಕರಾಗಿ ಎಂ. ಶ್ರೀಧರ ನಾಯ್ಕ, ಉಪಾಧ್ಯಕ್ಷರಾಗಿ ಸದಾಶಿವ ನಾಯ್ಕ ಬನ್ನೂರು, ಕೋಶಾಧಿಕಾರಿಯಾಗಿ ಸೇಸಪ್ಪ ನಾಯ್ಕ ಮರಕ್ಕಿಣಿ ಹಾಗೂ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here