






ಬೆಳ್ತಂಗಡಿ: 5 ಬಾರಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಬೆಳ್ತಂಗಡಿ ಕ್ಷೇತ್ರದ ದೀನ ದಲಿತರ, ನಿರ್ಗತಿಕರ, ಬಡವರ ಬಂಧುವಾಗಿ ಕೆಲಸ ಮಾಡಿದ್ದ ಮಾಜಿ ಶಾಸಕ ಕೀರ್ತಿಶೇಷ ಕೇದೆ ಮನೆತನದ ದಿ. ಕೆ. ವಸಂತ ಬಂಗೇರರವರು ಪ್ರಪ್ರಥಮ ಬಾರಿಗೆ ಅವರ ಹುಟ್ಟೂರಾದ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.


ಸದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಕ್ತಿನಗರ ಎಂಬಲ್ಲಿ ಅವರ ಹೆಸರಿನಲ್ಲಿ ವೃತ್ತ ಮತ್ತು ಪುತ್ಥಳಿ ನಿರ್ಮಾಣಕ್ಕೆ ಎಲ್ಲಾ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಮತ್ತು ಅವರ ಅಭಿಮಾನಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿರುತ್ತದೆ . ವೃತ್ತ ಮತ್ತು ಪುತ್ಥಳಿಯನ್ನು ಅವರ ಹುಟ್ಟುಹಬ್ಬದ ದಿನದಂದು ಅನಾವರಣ ಗೊಳಿಸಲಾಗುವುದು ಎಂದು ಸಮಿತಿಯ ಸದಸ್ಯರಲ್ಲಿ ಓರ್ವರಾದ ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ, ಕಲ್ಲಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









