ಕಡಿರುದ್ಯಾವರ: ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ

0

ಮುಂಡಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮುಂಡಾಜೆ ವಲಯದ ಕಡಿರುದ್ಯಾವರ ಕಾರ್ಯಕ್ಷೇತ್ರದಲ್ಲಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಮೇರಿ ಅಬ್ರಹಾಂ ಅವರ ಮನೆಯಲ್ಲಿ ನಡೆಸಲಾಗಿದ್ದು, ಡಿ. 23ರಂದು ಸಮಾರೋಪ ಸಮಾರಂಭವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯ ನಿರ್ದೇಶಕ ದಿನೇಶ್ ಡಿ. ದೀಪ ಬೆಳಗಿಸಿ ಅವಕಾಶವನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ತೊಡಗಿಸಿಕೊಂಡಲ್ಲಿ ಅಭಿವೃದ್ದಿ ಸಾಧ್ಯ ಮನೆಯಲ್ಲಿಯೇ ಇದ್ದುಕೊಂಡು ಸ್ಪ ಉದ್ಯೋಗ ಮಾಡಿ ಆದಾಯ ಪಡೆಯಲು ಟೈಲರಿಂಗ್ ಉದ್ಯೋಗ ಉತ್ತಮವಾಗಿದೆ.

ಕ್ಷೇತ್ರದಿಂದ ಈ ಒಂದು ತರಬೇತಿ ಪಡೆಯಲು ಅವಕಾಶ ಕಲ್ಪಿಸಿದ್ದು ಇನ್ನೂ CRE ಮತ್ತು ರುಡ್ ಸೆಟ್ಟ್ ಮೂಲಕ ಹೆಚ್ಚಿನ ತರಬೇತಿ ಪಡೆಯಬಹುದು. ಅವಶ್ಯಕತೆ ಇದ್ದಲ್ಲಿ ಸಿಡ್ನಿ ಸಾಲ ಪಡೆಯಬಹುದು ಎಂದು ತಿಳಿಸಿದರು. ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ನಮ್ಮ ಊರಿನ ಮಹಿಳೆಯರಿಗೆ ಸ್ವಉದ್ಯೋಗ ಮಾಡಲು ತರಬೇತಿಗೆ ಅವಕಾಶ ಕಲ್ಪಿಸಿದ್ದಕ್ಕೆ ಸಂತೋಷ ವ್ಯಕ್ತಪಡಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾವತಿ ಮಾತನಾಡುತ್ತ ನಾನು ಇವತ್ತು ಈ ವೇದಿಕೆಯಲ್ಲಿ ನಿಂತು ಧೈರ್ಯದಿಂದ ಮಾತನಾಡ ಬೇಕಾದರೆ ಜ್ಞಾನ ವಿಕಾಸ ಕೇಂದ್ರವೇ ಪ್ರೇರಣೆಯಾಗಿದೆ. ಇವತ್ತಿನ ಕಾರ್ಯಕ್ರಮದ ಸದುಪಯೋಗವನ್ನೂ ಪಡೆದುಕೊಂಡು ನಿಮ್ಮ ಅದಾಯವನ್ನು ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.

ಟೈಲರಿಂಗ್ ತರಬೇತಿ ಪಡೆದ ಸದಸ್ಯರು ಹಾಗೂ ಶಿಕ್ಷಕರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಯೋಜನಾಧಿಕಾರಿ ಯಶೋಧರ ಅವರು ಮನೆಯ ಹಿರಿಯರಾದ ಅಬ್ರಹಾಂ ಮಲ್ಲಡ್ಕ ಒಕ್ಕೂಟ ಅಧ್ಯಕ್ಷ ಗೋಪಾಲ ಟೈಲರಿಂಗ್ ತರಬೇತಿ ಶಿಕ್ಷಕಿ ಪುಷ್ಪ ಮೇಲ್ವಿಚಾರಕ ಜನಾರ್ದನ್ ಉಪಸ್ಥಿತರಿದ್ದರು. ದಿವ್ಯ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್ ನಿರೂಪಿಸಿದರು. ಸೇವಾಪ್ರತಿನಿಧಿ ರಶ್ಮಿ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here