






ಕರಾಯ: ಇತಿಹಾಸ ಪ್ರಸಿದ್ಧ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುಮಾರು ಮೂರೂವರೆ ಕೋಟಿ ವೆಚ್ಚದಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕೆಲಸದಲ್ಲಿ ಈಗಾಗಲೇ ಊರಿನವರ ಸಹಕಾರದಿಂದ ಬಹಳಷ್ಟು ಕೆಲಸ ಕಾರ್ಯವನ್ನು ನಡೆಸಿದ್ದು ಇನ್ನೂ ಬಹಳಷ್ಟು ಕೆಲಸ ಬಾಕಿ ಇದ್ದು ಸರಕಾರದಿಂದ ಹೆಚ್ಚಿನ ಅನುದಾನ ಮಂಜೂರುಗೊಳಿಸ ಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿರಕ್ಷಿತ್ ಶಿವರಾಂ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.


ಅದಕ್ಕೆ ಸ್ಪಂದಿಸಿದ ರಕ್ಷಿತ್ ಶಿವರಾಂ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನ ಮಾಡುವ ಬರವಸೆ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಕುದ್ದಣ್ಣಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಕೊಲ್ಲಿ,ಆಡಳಿತ ಸಮಿತಿ ಸದಸ್ಯ ಜಯವಿಕ್ರಮ ಕಲ್ಲಾಪು, ದಯಾನಂದ ಪಂಜಿಕುಡೇಳು ಉಪಸ್ಥಿತರಿದ್ದರು.









