ದಿನಚರಿ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಮತ್ತು ವಾರ್ಷಿಕ ಮಹಾಸಭೆ

0

ಬೆಳ್ತಂಗಡಿ: ಮಂಗಳೂರು ವಿಭಾಗ ಉಪವಲಯ ಅರಣ್ಯಾಧಿಕಾರಿ ಮೋಜಣಿದಾರರ ಸಂಘ, ದಕ್ಷಿಣ ಕನ್ನಡ ಜಿಲ್ಲೆಯಿಂದ ದಿನಚರಿ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಮತ್ತು ವಾರ್ಷಿಕ ಮಹಾಸಭೆಯನ್ನು ಡಿ. 20ರಂದು ಪುತ್ತೂರಿನ ಅಶ್ವಿನಿ ಹೋಟೆಲ್ ನಲ್ಲಿ ಜರುಗಿತು.

ಸದರಿ ಕಾರ್ಯಕ್ರಮವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್. ಮರಿಯಪ್ಪ, ಭಾಅಸೇ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಘದ ವತಿಯಿಂದ 2026ರ ದಿನಚರಿ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಅನಂತರ ವಿಭಾಗ ವ್ಯಾಪ್ತಿಯಲ್ಲಿ ಹಾವುಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸುವ ಉರಗ ಸಂರಕ್ಷಕರನ್ನು, ಈ ವರ್ಷ ನಿವೃತ್ತರಾದ ಉಪವಲಯ ಅರಣ್ಯಾಧಿಕಾರಿ ಸೀತಾರಾಮರವರನ್ನು, ಈ ವರ್ಷ ಅರಣ್ಯ ಇಲಾಖೆಯ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ಉಪವಲಯ ಅರಣ್ಯಾಧಿಕಾರಿಗಳನ್ನು, ಸಂಘದ ಪೂರ್ವಾಧ್ಯಕ್ಷ ಜಯಕುಮಾರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುನೀಲ ಕುಮಾರ ಬಿ.ಯು. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ ಎಸ್. ವಿಭೂತೆ, ಭಾಅಸೇ, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ್ ಪೈ, ಪುತ್ತೂರು ತಾಲೂಕಿನ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಸುಳ್ಯ ವಲಯದ ವಲಯಾರಣ್ಯಾಧಿಕಾರಿ ಮಂಜುನಾಥ ಎನ್., ಪುತ್ತೂರು ವಲಯದ ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಮ್., ಉಪ್ಪಿನಂಗಡಿ ವಲಯದ ವಲಯಾರಣ್ಯಾಧಿಕಾರಿ ರಾಘವೇಂದ್ರ ಹೆಚ್.ಪಿ, ಸುಬ್ರಹ್ಮಣ್ಯ ವಲಯದ ವಲಯಾರಣ್ಯಾಧಿಕಾರಿ ವಿಮಲ್ ಬಾಬು, ಬಂಟ್ವಾಳ ವಲಯದ ವಲಯಾರಣ್ಯಾಧಿಕಾರಿ ಸುನೀಲ್ ಡೀಸೋಜರವರು ಭಾಗಿಯಾಗಿದ್ದರು.

ಸಂಘದ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಂಡಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಗಸ್ತು ಅರಣ್ಯ ಪಾಲಕ ಹಾಗೂ ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷ ಜೀತೇಶ ಹಾಗೂ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಎಲ್ಲ ವೃಂದದ ಕ್ಷೇತ್ರ ಹಾಗೂ ಲಿಪಿಕ ಸಿಬ್ಬಂದಿಗಳು, ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಅಪೂರ್ವ ಸ್ವಾಗತ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸೌಮ್ಯರವರು ನಡೆಸಿಕೊಟ್ಟರು. ಯೋಗೀಶ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here