






ಉಜಿರೆ: ಪವಾಡ ಪುರಷರೆಂದು ಹೆಸರುವಾಸಿಯಾದ ಪಾದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆಯ ಕ್ರೈಸ್ತ ದೇವಾಲಯವು ದುರಸ್ತಿ ಹಾಗೂ ನವೀಕರಣಗೊಂಡು ಆಶೀರ್ವಚನ ಕಾರ್ಯಕ್ರಮ ಡಿ. 22ರಂದು ನಡೆಯಿತು. ರೈ.ರೆ.ಡಾ.ಪೀಟರ್ ಪೌಲ್ ಸಲ್ದಾನ್ಹಾರವರು ಮುಖ್ಯ ರಸ್ತೆಯ ಬಳಿ ನಿರ್ಮಿಸಿದ ಸಂತ ಅಂತೋನಿಯವರ ಗ್ರೋಟ್ಟೋ ಆಶೀರ್ವಚನ, ನಂತರ ಮುಖ್ಯ ದ್ವಾರದ ಉದ್ಘಾಟನೆ, ವೆಲಂಕಣಿ ಮಾತೆಯ ಗ್ರೋಟ್ಟೋ, ಬಳಿಕ ಚರ್ಚ್ ಶುದ್ಧಿಕರಣ, ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಪವಿತ್ರ ಪರಮ ಪ್ರಸಾದ ಮಂಟಪ್ಪ ಉದ್ಘಾಟಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.




ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷರೊಂದಿಗೆ, ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರು ವಾಲ್ಟರ್ ಡಿಮೆಲ್ಲೊರವರು, ಉಜಿರೆ ಧರ್ಮಕೇಂದ್ರದ ಧರ್ಮಗುರು ಆಬೆಲ್ ಲೋಬೋ, ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಜಯ್ ಲೋಬೊ ಹಾಗೂ ವಲಯದ ಮತ್ತು ಚರ್ಚ್ ನಲ್ಲಿ ಸೇವೆ ಸಲ್ಲಿಸಿದ ಧರ್ಮಗುರು ಹಾಗೂ ಇನ್ನಿತರ ಗುರುಗಳು, ಧರ್ಮ ಭಗೀನಿಯರು, ಕ್ರೈಸ್ತ ಭಾಂದವರು ಭಾಗವಹಿಸಿದರು.

ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.









