ವೇಣೂರು: ಕುಂಭಶ್ರೀ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ

0


ವೇಣೂರು: ನಿಟ್ಟಡೆ, ಕುಂಭಶ್ರೀ ಪದವಿ ಪೂರ್ವ ಕಾಲೇಜಿನ 2025ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳು
ಡಿ.18 ಮತ್ತು 19ರಂದು ನಡೆಯಿತು. ಈ ಬಾರಿ ಕ್ರೀಡೆಯೂ ಸಂಸ್ಕೃತಿಯೂ ಎರಡು ದಿನ ಅದ್ದೂರಿಯಾಗಿ ಜರುಗಿದ್ದು ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್. ಕಾರ್ಯಕ್ರಮದ ಅಧ್ಯಕ್ಷತೆಯೊಂದಿಗೆ, ಸಂಸ್ಥೆಯ ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಸಮಗ್ರ ಸಂಯೋಜನೆ, ಮಾರ್ಗದರ್ಶನದಿಂದ ಈ ಉತ್ಸವ ಮತ್ತಷ್ಟು ಮೆರಗುಗೊಂಡಿತು.

ಡಿ. 18ರಂದು ಬೆಳಿಗ್ಗೆ ಕ್ರೀಡಾಕೂಟವು ಅಧಿಕೃತ ಶಿಷ್ಟಾಚಾರಗಳೊಂದಿಗೆ ಶುರುವಾಯಿತು. ಮಾರ್ಚ್ ಪಾಸ್ಟ್‌ನಲ್ಲಿ ವಿದ್ಯಾರ್ಥಿಗಳು ಶಿಸ್ತು, ಸಮನ್ವಯ ಮತ್ತು ಕ್ರೀಡಾತ್ಮವನ್ನು ಪ್ರದರ್ಶಿಸಿದರು. ಉದ್ಘಾಟನೆಯನ್ನು ಕುಕ್ಕೇಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರ್ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ, ಮ್ಯಾರಥಾನ್ ಮೂಲಕ ಅದನ್ನು ಕುಂಭಶ್ರೀ ಕ್ರೀಡಾಂಗಣದಿಂದ ಇಂದಿರಾ ಗಾಂಧಿ ಕ್ರೀಡಾಂಗಣದವರೆಗೆ ಸಾಗುವಂತೆ ಪ್ರೇರಣೆ ನೀಡಿದರು.

ಮುಖ್ಯ ಕ್ರೀಡಾ ಸ್ಪರ್ಧೆಗಳು 100 ಮೀ. ಓಟ , 200 ಮೀ. ಓಟ , ರಿಲೇ , ಕ್ರಿಕೆಟ್ (ಪುರುಷ ವಿಭಾಗ) , ವಾಲಿಬಾಲ್ (ಪುರುಷ ವಿಭಾಗ) , ಲಗೋರಿ (ಮಹಿಳಾ ವಿಭಾಗ), ಥ್ರೋಬಾಲ್ (ಮಹಿಳಾ ವಿಭಾಗ), ಶಾಟ್‌ಪುಟ್ , ಡಿಸ್ಕಸ್ ತ್ರೋ ನಡೆಯಿತು.

ಶೈಕ್ಷಣಿಕ ಸಲಹೆಗಾರ ಮನೋಜ್ ಎಸ್. ಧನ್ಯವಾದ ಸಲ್ಲಿಸಿದರು.
ಡಿ. 19ರಂದು ಕುಂಭಶ್ರೀ ಕ್ಯಾಂಪಸ್‌ನಲ್ಲಿ ಸಾಂಸ್ಕೃತಿಕ ಉತ್ಸವ ನೆರವೇರಿತು. ಮುಖ್ಯ ಅತಿಥಿಗಳಾಗಿ ಹಾಸನದ ಉದ್ಯಮಿ
ಶಶಿಧರ್ ಡಿ. ಕೃಷಿಕ ಸುರೇಶ್ ಪೂಜಾರಿ ಭಾಗವಹಿಸಿದ್ದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಭಿಲಾಶ್, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಸಂತೋಷ್ ಕಾರ್ಯಕ್ರಮ ನಿಭಾಯಿಸಿದರು.

ಸಾಂಸ್ಕೃತಿಕ ಸ್ಪರ್ಧೆಗಳ ವೈವಿಧ್ಯ ಫುಡ್ ಫೆಸ್ಟ್ , ಟ್ರೆಶರ್ ಹಂಟ್ , ರಂಗೋಲಿ , ಥೀಮ್ ಪರ್ಫಾರ್ಮೆನ್ಸ್ , ಪಾಟ್ ಪೈಂಟಿಂಗ್ , ವೀಡಿಯೋಗ್ರಫಿ ಹಾಗೂ ಇತರೆ ಪ್ರತಿಭಾ ಪ್ರದರ್ಶನಗಳು
ವಿಜೇತರಿಗೆ ಪದಕ–ಪ್ರಮಾಣಪತ್ರ ವಿತರಿಸಲಾಯಿತು.

ಸಮಾರೋಪದ ಮುಖ್ಯ ಅತಿಥಿಯಾಗಿ ಕೃಷಿಕ ಜಾನ್ ಲಿನು ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಿಖಿತಾ ಎಂ., ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರಣ್ಯ ಕೆ.ಎಸ್. ಸಮರ್ಥ ನಿರೂಪಣೆ ನೀಡಿದರು.

LEAVE A REPLY

Please enter your comment!
Please enter your name here