






ಧರ್ಮಸ್ಥಳ: ಗ್ರಾಮ ಪಂಚಾಯತ್ ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ, ಕನ್ಯಾಡಿ ಸೇವಾಭಾರತಿ, ಕನ್ಯಾಡಿ ದುರ್ಗಾ ಮಾತೃ ಮಂಡಳಿ ಇದರ ಸಹಭಾಗಿತ್ವದಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಡಿ. 19ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಚಾಲನೆ ನೀಡಿ, ಭಾಗವಹಿಸಿದ ಮಹಿಳೆಯರಿಗೆ ಶುಭಹಾರೈಸಿದರು. ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.


ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ ಮಾತನಾಡಿ, ಟೈಲರಿಂಗ್ ಕಲಿಕೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. “ದೀಪ ಜ್ಯೋತಿ ಹೇಗೆ ಬೆಳಗುತ್ತದೋ, ಹಾಗೆಯೇ ನೀವು ಈ ವಿದ್ಯೆಯನ್ನು ಉಪಯೋಗಿಸಿ ಸಮಾಜದಲ್ಲಿ ಬೆಳಗಬೇಕು” ಎಂದು ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, NRLM ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ, ಪಂಚಾಯತ್ ಲೆಕ್ಕ ಸಹಾಯಕಿ ಪ್ರಮೀಳಾ, ದುರ್ಗಾಮಾತೃ ಮಂಡಳಿ ಅಧ್ಯಕ್ಷರು ಹಾಗೂ ಸಬಲಿನಿ ಯೋಜನೆಯ ಸಂಚಾಲಕಿ ಮಮತಾ ಬಿ., ಕೌಶಲ್ಯ ವಲಯ ಮೇಲ್ವಿಚಾರಕಿ ವೀಣಾಶ್ರೀ ಕೆ. ಕೆ., ಪಂಚಾಯತ್ ಸದಸ್ಯರಾದ ವಸಂತಿ, ಸುನಿತಾ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಶಾಂಭವಿ ಹಾಗೂ ಟೈಲರಿಂಗ್ ತರಬೇತುದಾರರಾದ ಸುಮತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 40 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ರವರು ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟಕ್ಕೆ 3 ಹೊಲಿಗೆ ಯಂತ್ರ ನೀಡುವುದಾಗಿ ತಿಳಿಸಿದ್ದು, ಇದು ಮಹಿಳಾ ಸಬಲೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಕೃಷಿ ಸಖಿ ಸುಚೇತಾ ಸ್ವಾಗತಿಸಿ, MBK ಚಂದ್ರಾವತಿ ನಿರೂಪಿಸಿ, LCRP ಪುಷ್ಪಾವತಿ ಧನ್ಯವಾದವಿತ್ತರು.









