ಬೆಳ್ತಂಗಡಿ ವಕೀಲರ ಸಂಘದ ನೂತನ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಮತ್ತು ತಂಡದ ಪದಗ್ರಹಣ ಸಮಾರಂಭ-ವಕೀಲ ವೃತ್ತಿ ಉದಾತ್ತ ವೃತ್ತಿ: ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ-ಸಾಮರಸ್ಯಕ್ಕೆ ಇನ್ನೊಂದು ಹೆಸರು ಬೆಳ್ತಂಗಡಿ ವಕೀಲರ ಸಂಘ: ಮೆಲ್ವಿನ್ ಪ್ರಕಾಶ್ ನೋರೋನ್ಹ

0

ಬೆಳ್ತಂಗಡಿ: ತಾಲೂಕಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರತಿಷ್ಟಿತ ಬೆಳ್ತಂಗಡಿ ವಕೀಲರ ಸಂಘದ ಪದಗ್ರಹಣ ಸಮಾರಂಭವು ಡಿ.19ರಂದು ಹೋಲಿ ರಿಡೀಮರ್ ಆಡಿಟೋರಿಯಂನಲ್ಲಿ ನಡೆಯಿತು.

ಕರ್ನಾಟಕ ಸರಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾತನಾಡಿ ಬೆಳ್ತಂಗಡಿ ವಕೀಲರ ಸಂಘದಲ್ಲಿ ಯುವ ಹಾಗೂ ಮಹಿಳಾ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂತಸದಾಯಕ. ಬೆಳ್ತಂಗಡಿಯ ಪ್ರಮುಖ ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ವಕೀಲರೇ ಆಗಿದ್ದು ಹೆಚ್ಚಿನ ಅವಕಾಶಗಳು ಇರುವ ವಕೀಲ ವೃತ್ತಿ ಉದಾತ್ತ ವೃತ್ತಿ ಎಂದರು.

ಜಿಲ್ಲಾ ಸರಕಾರಿ ವಕೀಲರಾದ ಮೆಲ್ವಿನ್ ಪ್ರಕಾಶ್ ನೋರೋನ್ಹ ಮಾತನಾಡಿ ಎಲ್ಲಾ ಧರ್ಮಗಳ ಆಚರಣೆಗಳನ್ನು ಜೊತೆಗೂಡಿ ಆಚರಿಸುವ ಮೂಲಕ ಸಾಮರಸ್ಯಕ್ಕೆ ಬೆಳ್ತಂಗಡಿ ವಕೀಲರ ಸಂಘ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನೂತನ ಸಂಘದ ಪದಾಧಿಕಾರಿಗಳನ್ನು ಅಧಿಕೃತವಾಗಿ ಪರಿಚಯಿಸಿ ಅಧಿಕಾರ ಹಸ್ತಾಂತರಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ವಸಂತ ಮರಕಡ ಹಾಗೂ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ. ಅವರನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಲಾಯಿತು.

ಬಡ ಕುಟುಂಬದ ಎಂಬಿಬಿಎಸ್ ವಿದ್ಯಾರ್ಥಿ ಆಶಿಕ್ ಎಸ್ ಎಂ ಅವರಿಗೆ ವಕೀಲರ ಸಂಘದಿಂದ ಶೈಕ್ಷಣಿಕ ಸಹಾಯ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರಕಾರಿ ವಕೀಲರಾದ ಮೆಲ್ವಿನ್ ಪ್ರಕಾಶ್ ನೋರೋನ್ಹ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿ ಮನು ಬಿ.ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಮ್‌ಎಫ್‌ಸಿ ವಿಜಯೇಂದ್ರ ಟಿ.ಹೆಚ್., ಹೈಕೋರ್ಟ್ ವಕೀಲ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಉಪಾಧ್ಯಕ್ಷ ಶ್ರೀನಿವಾಸ ಗೌಡ, ಜೊತೆ ಕಾರ್ಯದರ್ಶಿ ಹರ್ಷಿತ್ ಹೆಚ್., ಕೋಶಾಧಿಕಾರಿ ಮುಮ್ತಾಜ್ ಬೇಗಂ, ಹಿರಿಯ ವಕೀಲರ ಸಮಿತಿಯ ಅಧ್ಯಕ್ಷ ಶಿವಕುಮಾರ್ ಎಂ. ನಿಕಟ ಪೂರ್ವ ಕಾರ್ಯದರ್ಶಿ ನವೀನ್, ನಿಕಟಪೂರ್ವ ಅಧ್ಯಕ್ಷ ವಸಂತ ಮರಕಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂದೀಪ್ ಡಿಸೋಜ, ಕೃಷ್ಣ ಶೆಣೈ, ದಿನೇಶ್ ಶೆಟ್ಟಿ, ಉಷಾ ಎನ್ ಜಿ., ಗಣೇಶ್ ಗೌಡ, ಲತಾಶ್ರೀ ಎ., ಸೌಮ್ಯ ಪಿ., ಆಸ್ಮಾ, ಹಿರಿಯ ವಕೀಲ ಸಮಿತಿಯ ಸದಸ್ಯರಾದ ಬಿ ಕೆ ಧನಂಜಯ್ ರಾವ್, ಶಶಿಕಿರಣ್ ಜೈನ್, ಸರಕಾರಿ ಸಹಾಯಕ ಅಭಿಯೋಜಕ ದಿವ್ಯರಾಜ್ ಮತ್ತು ಆಶಿಕಾ ಎಂ, ಬೆಳ್ತಂಗಡಿ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೊಸ್ಟ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ಸೈಟ್ ತೆರೇಸಾ ಕಾಲೇಜಿನ ಲೀನಾ, ಜೆಸಿಂತ, ಜಿಲ್ಲೆಯ ವಕೀಲರು ಸಂಘದ ಸದಸ್ಯರು, ತಾಲೂಕಿನ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು, ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕ ಸುಬ್ಬಾಪೂರ್ ಮಠ್ ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಗೂ ವಕೀಲರ ಸಂಘದ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಸ್ವಾಗತಿಸಿ, ಹಿರಿಯ ವಕೀಲರ ಸಮಿತಿಯ ಸದಸ್ಯ ಬಿ.ಕೆ. ಧನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶ್ರೀನಿವಾಸ್ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here