






ಬೆಳಾಲು: ಗ್ರಾಮ ಪಂಚಾಯತಿನಲ್ಲಿ 2025-26ನೇ ಸಾಲಿನ ವಿಕಲ ಚೇತನರ ಹಾಗೂ ಹಿರಿಯ ನಾಗರೀಕಇಲಾಖೆ, ಗ್ರಾಮೀಣ ವಿಕಲಚೇತನರ ಪುನರ್ವಸತಿ ಸಂಯೋಜಕರ ಕಾರ್ಯಾಲಯ ಗ್ರಾಮ ಪಂಚಾಯತ್
ವತಿಯಿಂದ ಡಿ. 19ರಂದು ಗ್ರಾಮ ಪಂಚಾಯತು ಸಭಾ ಭವನದಲ್ಲಿ ವಿಶ್ವವಿಕಲ ಚೇತನರ ದಿನಾಚರಣೆ ಹಾಗೂ ವಿಕಲ ಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ನೆಡೆಯಿತು. ಅಧ್ಯಕ್ಷತೆಯನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ. ಕೆ. ಚಂದ್ರಕಲಾ, ಎಂಡೋ ಸಂತ್ರಸ್ತರ ಹೋರಾಟ ಸಮಿತಿಯ ಶ್ರೀಧರ ಗೌಡ ಕೆಂಗುಡೇಲು ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಪಂಚಾಯತ್ ವಿವಿದೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಫ್ಟಿಸ್ಟ್ ಡಿಸೋಜ ಸರಕಾರ ವಿವಿಧ ಯೋಜನೆ ಕುರಿತು ಮಾಹಿತಿ ನೀಡಿದರು.


ಉದ್ಯಮಿ ಜಯಣ್ಣ ಗೌಡ ಮಿನಂದೇಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರು ಗಳಾದ ಸುರೇಂದ್ರ ಗೌಡ, ಕೃಷ್ಣಯ್ಯ ಆಚಾರ್ಯ, ಜಯಂತಿ, ನಿವೃತ್ತ ನೋಡಲ್ ಅಧಿಕಾರಿ ರತ್ನಾವತಿ ಮಾಯ ಗಾಂಧಿ ನಗರ ಸುಚಿತ್ರ ಸುರೇಶ್ ದಾಸ್, ಓಬು ಪಳಸ, ಸೌಭಾಗ್ಯ ವಿಕಲ ಚೇತನರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಶ್ರಫ್ ಅಲಿಕುಂಜಿ, ಮೆನೇಜರ್ ಸಹನ್ ಕುಮಾರ್ ಉಪಸ್ಥಿತರಿದ್ದರು.
ಬೆಳಾಲು ಪಂಚಾಯತ್ ವ್ಯಾಪ್ತಿಯ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು, ವಿಕಲ ಚೇತನರು, ವಿವಿಧ ಪಂಚಾಯತಿನ ವಿಕಲ ಚೇತನರ ಸಂಯೋಜಕರು ಗ್ರಾಮಸ್ಥರು ಹಾಜರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ ಎಸ್. ಸ್ವಾಗತಿಸಿದರು. ಬೆಳಾಲು ಗ್ರಾಮ ಪಂಚಾಯತ್ ವಿಕಲ ಚೇತನರ ಸಂಯೋಜಕ ಈರಣ್ಣ ಎಸ್. ಹೆಚ್. ಪ್ರಸ್ತಾಪಿಸಿದರು. ಪುರಾಣಿಕ್ ಪ್ರಾರ್ಥನೆ ಗೈದರು. ಪಂಚಾಯತ್ ಸಿಬ್ಬಂದಿ ವರ್ಗ ಸಹಕರಿಸಿದರು.









