ಬೆಳಾಲು: ಮಾಯ ಗಾಂಧಿನಗರದಲ್ಲಿ ಮಂತ್ರ ದೇವತೆ, ಕೊರಗಜ್ಜ ದೈವದ ಕೋಲ

0

ಬೆಳಾಲು: ಗ್ರಾಮದ ಮಾಯ ಗಾಂಧಿನಗರ ಸುರೇಶ್ ದಾಸ್ ರವರ ಮನೆಯಲ್ಲಿ ಡಿ. 14ರಂದು ರಾತ್ರಿ ಮಂತ್ರದೇವತೆ, ಕೊರಗಜ್ಜ ದೈವದ ಕೋಲ ನಡೆಯಿತು. ಅಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಮಧ್ಯಾಹ್ನ ಹರಿಸೇವೆ, ಸಂಜೆ ದುರ್ಗಾ ಪೂಜೆ ನಡೆಯಿತು. ಹೊನ್ನಪ್ಪ ದಾಸ್ ಮತ್ತು ಮಕ್ಕಳು, ಸುರೇಶ್ ದಾಸ್ ಮತ್ತು ಮಕ್ಕಳು, ಸ್ವಾಮಿ ಕೊರಗಜ್ಜ ಭಕ್ತ ವೃಂದದವರು ಕಾರ್ಯಕ್ರಮ ದ ಯಶಸ್ವಿಗೆ ಸಹಕರಿಸಿದರು. ಭಕ್ತರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here