ಅಳದಂಗಡಿಯ ಸ್ವರಾಜ್‌ ಟವರ್ಸ್‌ನಲ್ಲಿ ಶುಭಾರಂಭಗೊಂಡಿರುವ ʼದಿ ದಕ್ಷಿಣ್‌ ಭವನ್‌ʼ- ಸಸ್ಯಹಾರಿ ಹೋಟೆಲ್‌ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಭೇಟಿ

0

ಅಳದಂಗಡಿ: ಮುಖ್ಯ ರಸ್ತೆಯ ಸ್ವರಾಜ್ ಟವರ್ ನಲ್ಲಿ ದಿ ದಕ್ಷಿಣ್ ಭವನ್ ಎಂಬ ಸಸ್ಯಹಾರಿ ರೆಸ್ಟೋರೆಂಟ್ ಡಿ.12ರಂದು ಶುಭಾರಂಭಗೊಂಡಿತ್ತು. ಈ ನೂತನ ಹೋಟೆಲ್ ಗೆ ಮಾಜಿ ಸಂಸದ ಡಿ.ಕೆ ಸುರೇಶ್ ಡಿ. 18ರಂದು ಬೆಳಗ್ಗೆ 10 ಗಂಟೆಗೆ ಬಂದು ತಿಂಡಿ ತಿಂದು ಹೋಗಿದ್ದಾರೆ. ಧರ್ಮಸ್ಥಳ ಕ್ಷೇತ್ರಕ್ಕೆ ಬಂದ ಡಿ.ಕೆ ಸುರೇಶ್ ದಕ್ಷಿಣ್ ಭವನ್ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಹೋಗಿದ್ದಾರೆ.

ಅನಿಲ್ ಅಂಚನ್, ಶರತ್ ಚಂದ್ರ ಅವರ ಮಾಲೀಕತ್ವದ ದಿ ದಕ್ಷಿಣ್‌ ಭವನ್‌ ಹೋಟೆಲ್‌ನಲ್ಲಿ ದಿ ಕ್ಯಾಪ್ಸಿ ಮಲ್ಟಿ ಕ್ಯುಸಿನ್‌ ಇದ್ದು ಇದರಲ್ಲಿ ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್‌ ಹಾಗೂ ಚೈನೀಸ್‌ ಫುಡ್‌ಗಳು ಸಿಗಲಿವೆ. ಜೊತೆಗೆ ಬಾಂಕ್ವೆಟ್‌ ಪಾರ್ಟಿ ಹಾಲ್‌ ಇದ್ದು ಶುಭ ಸಮಾರಂಭಗಳಿಗೆ ಉತ್ತಮ ಸೇವೆ ಕೊಡಲು ಮುಂದಾಗಿದೆ. ದಿ ಕ್ಯಾಪ್ಸಿಯವರದ್ದೇ ಆದ ದಿ ಕ್ಯಾಪ್ಸಿ ಕ್ಯಾಟರರ್ಸ್‌, ದಿ ಕ್ಯಾಪ್ಸಿ ಹೋಮ್‌ ಫುಡ್‌ ಪ್ರೊಡಕ್ಸ್‌ಗಳು, ದಿ ಕ್ಯಾಪ್ಸಿ ಕಿಚನ್‌ ಹಳೆಯಂಗಡಿಯ ಪಂಡಿತ್‌ ಹರಿಭಟ್‌ ರಸ್ತೆಯ ಕಾಶಿಪಟ್ನ ಶಿರ್ತಾಡಿಯಲ್ಲಿದ್ದು ಉತ್ತಮ ಸೇವೆ ಕೊಡುತ್ತಿದೆ.

LEAVE A REPLY

Please enter your comment!
Please enter your name here