ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

0

ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯಲ್ಲಿ ಡಿ.13ರಂದು ಕ್ರಿಸ್ಮಸ್ ಹಬ್ಬವನ್ನು ಸಡಗರದೊಂದಿಗೆ ಅತ್ಯಂತ ಸಂಭ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಯೇಸು ಕ್ರಿಸ್ತರು ಗೋದಲಿಯಲ್ಲಿ ಜನಿಸಿದ ದಿವ್ಯ ಸಂದೇಶವನ್ನು ಪ್ರತಿಬಿಂಬಿಸುವ ವರ್ಣರಂಜಿತ ಚಿತ್ರ ಅನಾವರಣಗೊಳಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷರು ಕಳೆದ ಹಲವು ವರ್ಷಗಳಿಂದ ಅನುಗ್ರಹ ಸಹಕಾರ ಸಂಘದಲ್ಲಿ ಕ್ರಿಸ್ಮಸ್ ಹಬ್ಬವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರ ಮತ್ತು ಸಿಬಂಧಿಗಳ ನಡುವೆ ಸಮಾನ ಭಾವನೆ ಮೂಡುತ್ತದೆ.ಇದರಿಂದಾಗಿ ಸಂಸ್ಥೆಯ ಬಲವರ್ಧನೆ ಸಾಧ್ಯವಾಗುತ್ತದೆ ಎಂದರು.

ಕ್ರಿಸ್ಮಸ್ ಹಬ್ಬವು ಮಾನವೀಯತೆ, ಪ್ರೀತಿ, ಕ್ಷಮೆ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಹಿಂದಿನ ದಿನಗಳಲ್ಲಿ ಕುಟುಂಬ ಸಮೇತರಾಗಿ ಕ್ರಿಸ್ಮಸ್ ಕ್ಯಾರೋಲ್ಸ್ ಹಾಡುವುದು, ಹೊಸ ಬಟ್ಟೆಗಳನ್ನು ಧರಿಸುವುದು ಹಾಗೂ ಮನೆಯಲ್ಲೇ ತಯಾರಿಸಿದ ವಿವಿಧ ಸಾಂಪ್ರದಾಯಿಕ ತಿಂಡಿ–ತಿನಿಸುಗಳಾದ ಕುಸ್ವಾರ್ ಹಂಚಿಕೊಂಡು ರಾತ್ರಿ ಸಂಭ್ರಮದ ಬಲಿಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಹಬ್ಬವು ಪಬ್‌, ಬಾರ್‌,ಮಾರುಕಟ್ಟೆಯಂತಹ ವ್ಯಾವಾಹರಿಕ ಸ್ಥಳಗಳಲ್ಲಿ ಜನರನ್ನು ಆಕರ್ಷಿಸಲು ಮತ್ತು ವ್ಯಾಪಾರದ ಅಭಿವ್ರದ್ಧಿಗಾಗಿ ಆಚರಿಸಲ್ಪಡುತ್ತಿರುವುದು ಮಾತ್ರವಲ್ಲ ಕ್ರಿಸ್ ಮಸ್ ಹಬ್ಬವನ್ನು ಕೆಲವು ದಿನಗಳ ಕೇವಲ ಆಡಂಭರದ ಹಬ್ಬವನ್ನಾಗಿ ಆಚರಿಸಿ ಯೇಸು ಕ್ರಿಸ್ತರ ನಿಜವಾದ ಸಂದೇಶದಿಂದ ದೂರ ಸರಿಯುತ್ತಿರುವುದು ವಿಷಾದನೀಯ ಎಂದರು.

ಪ್ರಭು ಯೇಸು ಕ್ರಿಸ್ತರ ಜನ್ಮದಿನವನ್ನು ಡಿ.25ರಂದು ಜಗತ್ತಿನಾದ್ಯಂತ ಅತೀ ವಿಜ್ರಂಭನೆಯಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಕ್ರಿಸ್ಮಸ್ ಹಬ್ಬವು ಸರ್ವರಿಗೂ ಶಾಂತಿ, ಸಹಬಾಳ್ವೆ, ನೆಮ್ಮದಿಯ ಜೀವನ ಹಾಗೂ ಉತ್ತಮ ಆರೋಗ್ಯವನ್ನು ನೀಡಲಿ ಎಂದು ಹಾರೈಸಿದರು.“ಇರುವೆ ಹುಡುಕಿಕೊಂಡು ಹೋಗುವಂತಹ ಸಿಹಿ ಸಕ್ಕರೆಯಂತೆ ನಾವು ಕೂಡ ನಮ್ಮ ಜೀವನದಲ್ಲಿ ಸಾರ್ಥಕತೆ, ಮೌಲ್ಯಭರಿತ ಹಾಗೂ ಮಧುರತೆಯ ಲಕ್ಷಣಗಳುಳ್ಳ ಸಿಹಿ ಜೀವನವನ್ನು ಅನುಭವಿಸಬೇಕು” ಎಂಬ ಸಂದೇಶವನ್ನು ಇದೇ ಸಂದರ್ಭದಲ್ಲಿ ಅಧ್ಯಕ್ಷರು ನೀಡಿದರಲ್ಲದೆ ಏಸುಕ್ರಿಸ್ತರ ಉಪದೇಶದಂತೆ ಬಡವರ ಳಿಗೆಗಾಗಿ ನಾವೆಲ್ಲರೂ ಶ್ರಮಿಸೋಣವೆಂದು ಕರೆ ನೀಡಿದರು.

ಅಧ್ಯಕ್ಷರು ತಮ್ಮ 61ನೇ ಜನ್ಮದಿನದ ಅಂಗವಾಗಿ ಸಿಬ್ಬಂದಿ ವರ್ಗ ನೀಡಿದ ಅಚ್ಚರಿ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಾಚರಣೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಪ್ರಧಾನ ಕಚೇರಿಯ ಸಿಬ್ಬಂದಿಗಳಾದ ಮೆಲಿಟಾ ಪಾಯ್ಸ್ ಮತ್ತು ಜಾನೆಟ್ ಸೆರಾವೋ, ಬೆಳ್ತಂಗಡಿ ಶಾಖೆಯ ಸಿಬ್ಬಂದಿ ರೋಸ್ ಪ್ರಿಯಾ ಪಿಂಟೋ ಅವರ ನೇತೃತ್ವದಲ್ಲಿ ಹಾಸ್ಯಮಯ ವಿನೋದ ಸ್ಪರ್ಧೆಗಳು ನಡೆದವು. ಜೊತೆಗೆ ಫ್ಲಾಶ್ ಮಾಬ್, ಆಕ್ಷನ್ ಗೇಮ್ಸ್ ಸೇರಿದಂತೆ ವಿವಿಧ ಮನೋರಂಜನಾ ಚಟುವಟಿಕೆಗಳನ್ನು ನಡೆಸಲಾಗಿದ್ದು, ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಘದ ಅಧ್ಯಕ್ಷರು ಬಹುಮಾನಗಳನ್ನು ವಿತರಿಸಿದರು.

ಸಂಘದ ಅಧ್ಯಕ್ಷರು ಆಡಳಿತ ಮಂಡಳಿಗೆ ಮತ್ತು ಸಂಘದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕ್ರಿಸ್ಮಸ್ ಉಡುಗೊರೆಗಳನ್ನು ವಿತರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.

ಮೂಡಬಿದರೆ ಶಾಖೆಯ ವ್ಯವಸ್ಥಾಪಕ ಆಲ್ವಿನ್ ಜೊಸ್ಸಿ ಸೆರಾವೋರವರು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಅವರು ನಿರೂಪಿಸಿದರು. ಪ್ರಧಾನ ಕಚೇರಿಯ ಶಾಖಾ ವ್ಯವಸ್ಥಾಪಕ ಪ್ರವೀಣ್ ಪಿಂಟೊ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here