ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮಡಂತ್ಯಾರು ರೋಟರಿ ಕ್ಲಬ್ ನೇತೃತ್ವದಲ್ಲಿ TKR/THR ಸಂಧಿ ತಪಾಸಣಾ ವಿಶೇಷ ಶಿಬಿರ

0

ಮಡಂತ್ಯಾ‌ರು: ರೋಟರಿ ಕ್ಲಬ್ ಹಾಗೂ ಮಂಗಳೂರಿನ ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಸಂಪೂರ್ಣ ಮಂಡಿ ಮರುಜೋಡಣೆ ಮತ್ತು ಸೊಂಟದ ಕೀಲು ಜೋಡಣೆ (TKR/THR) ಸಂಬಂದಿಸಿದ ತಪಾಸಣೆಯ ಶಿಬಿರವನ್ನು 2025ರ ನ.23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಡಂತ್ಯಾ‌ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 50 ರೋಗಿಗಳು ಮೊಣಕಾಲು, ಸೊಂಟ ಹಾಗೂ ಅಸ್ತಿ -ಸ್ನಾಯು ಸಂಬಂಧಿತ ತೊಂದರೆಗಳಿಗೆ ಚಿಕಿತ್ಸೆ ಮತ್ತು ಸಲಹೆ ಪಡೆದು ಪ್ರಯೋಜನ ಪಡೆದರು.

ಕಾರ್ಯಕ್ರಮವು ರೋಟರಿ ಕ್ಲಬ್ ಮಡಂತ್ಯಾರ್ ಅಧ್ಯಕ್ಷ Rtn. PHF. ಮ್ಯಾಕ್ಸಿಮ್ ಅಲ್ಬುಕರ್ಕ್ ಅವರ ಆತ್ಮೀಯ ಸ್ವಾಗತದೊಂದಿಗೆ ಆರಂಭವಾಯಿತು. ನಂತರ ಅತಿಥಿಗಳಾಗಿ ಆಗಮಿಸಿದ್ದ ಸೇಕ್ರೆಡ್ ಹಾರ್ಟ್ ಚುರ್ಚಿನ ಧರ್ಮಗುರು Rev. ಫಾದರ್ ಸ್ಟ್ಯಾನಿ ಗೋವಿಯಾಸ್ ಮತ್ತು Rtn. ಪ್ರಶಾಂತ್ ಶೆಟ್ಟಿ, ದೀಪ ಬೆಳಗಿಸಿ ಶಿಬಿರಕ್ಕೆ ಶುಭಾಶಯ ಕೋರಿದರು.

ಯೆನಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ. ಜೀವನ್ ಪೆರೇರಾ (ಅರ್ಥೋಸ್ಕೋಪಿ, ಅರ್ಥೋಪ್ಲಾಸ್ಟಿ ಮತ್ತು ಕ್ರೀಡಾ ವೈದ್ಯಶಾಸ್ತ್ರ – ಸಿಂಗಪುರ್) ಅವರ ನೇತೃತ್ವದ ತಜ್ಞರ ತಂಡ ರೋಗಿಗಳಿಗೆ ವಿಶೇಷ ತಪಾಸಣೆ ಹಾಗೂ ಮಾರ್ಗದರ್ಶನವನ್ನು ನೀಡಿತು.

ರೋಟರಿಯನ್ನಳಾದ ಉದಯ ಕುಮಾರ್ ಜೈನ್, ಮ್ಯಾಕ್ಸಿಮ್ ಅಲ್ಬುಕರ್ಕ್, ಜಿ. ವಾಸುದೇವ ಗೌಡ, ಪ್ರಶಾಂತ್ ಶೆಟ್ಟಿ ರಮೇಶ್ ಮೂಲ್ಯ ಜೆರಾಲ್ಡ್ ಮಿರಾಂದ, ಸೆಲೆಸ್ಟಿನ್ ಡಿಸೋಜಾ, ಅಲ್ಲದೆ ಅಂನ್ಸ್ ಜಿ.ವಿ., ವೇದವತಿ, ಆನೆಟ್ ಡಾ. ಪೃಥ್ವಿ ಜಿ.ವಿ., ಪೂರ್ವಿ ಜಿ.ವಿ., ಮತ್ತು ಅರುಷಿ ಪಿ. ಶೆಟ್ಟಿ ಶಿಬಿರದ ಯಶಸ್ವಿ ನಿರ್ವಹಣೆಗೆ ಮಹತ್ವದ ಕೊಡುಗೆ ನೀಡಿದರು.

ಶಿಬಿರದ ಯಶಸ್ಸಿಗೆ ಸಹಕರಿಸಿದ ಕ್ಯಾಥೋಲಿಕ್ ಸಭಾ ಮಡಂತ್ಯಾರು ಘಟಕ, ಸ್ತ್ರೀ ಶಕ್ತಿ ಮಹಿಳಾ ಸಂಘಟನೆ, ಅಪ್ಯಂ ಆಯುರ್ವೇದ ಪ್ರತಿಷ್ಠಾನ ಸಾಗರ ಡಾ. ಹೇಮಚಂದ್ರ ಶೆಟ್ಟಿ ಹಾಗೂ ಮಡಂತ್ಯಾರು ಗ್ರಾಮ ಪಂಚಾಯತ್ ಅವರಿಗೆ ರೋಟರಿ ಕ್ಲಬ್ ನಿಂದ ಧನ್ಯವಾದ ಸಲ್ಲಿಸಿದರು.

ರೋಟರಿ ಕ್ಲಬ್ ಮಡಂತ್ಯಾರಿನ ಕಾರ್ಯದರ್ಶಿ Rtn, PHE, ಜಿ. ವಾಸುದೇವ ಗೌಡ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here