ಲಾಯಿಲದಲ್ಲಿ ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆ ಉದ್ಘಾಟನೆ

0

ಬೆಳ್ತಂಗಡಿ: ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡ ಮೊಬಿನ್ಸ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿಯವರು ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆಯನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ತೆರೆದಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ನ.25ರಂದು ನೆರವೇರಿತು.

ಸದರಿ ಕಂಪನಿಯಿಂದ ಖರೀದಿ ಮಾಡಿದ ಆಯ್ದ ಯಂತ್ರೋಪಕರಣಗಳಿಗೆ ಕೃಷಿ/ತೋಟಗಾರಿಕೆ ಇಲಾಖೆಯಿಂದ ಸಹಾಯಧನವು ಲಭ್ಯವಿದ್ದು ಇಂದು ಅರ್ಜಿ ಹಾಕಿದ ಅರ್ಹ 60 ಜನ ರೈತ ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಅಡಿಕೆ ಮರ ಹತ್ತುವ ಯಂತ್ರೋಪಕರಣಗಳನ್ನು ಪ್ರಾತ್ಯಕ್ಷಿತೆ ನೀಡಿ ವಿತರಿಸಲಾಯಿತು. ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮತ್ತು ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿದರು. ಗ್ರಾ.ಪಂ. ಸದಸ್ಯರಾದ ಅರವಿಂದ ಲಾಯಿಲ, ಗಣೇಶ್ ಆರ್., ನಗರ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್ ಎಂ., ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಹಾಗೂ ಸಿಬ್ಬoದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here