ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತು ಸಾಹಿತ್ಯ ಬರವಣಿಗೆಯ ಕಾರ್ಯಾಗಾರ

0

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್‌.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತು ಸಾಹಿತ್ಯದ ಬರವಣಿಗೆ” ವಿಷಯದ ಕುರಿತು ನ.24ರಂದು ವಿಶೇಷ ಕಾರ್ಯಾಗಾರವನ್ನು ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಾಗಾರವು ವಿದ್ಯಾರ್ಥಿಗಳ ಸಾಹಿತ್ಯ ಜ್ಞಾನ ವಿಸ್ತರಣೆಗೆ ಮಹತ್ವದ ವೇದಿಕೆಯಾಯಿತು.

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗೀತಾ ಡಿ. ಹಾಗೂ ಸಂದ್ಯಾ ಎನ್. ಅವರು ಭಾಗವಹಿಸಿ ಕನ್ನಡ ಸಾಹಿತ್ಯದ ಪಾರಂಪರ್ಯ, ಅದರ ಐತಿಹಾಸಿಕ ಬೆಳವಣಿಗೆ, ಆಧುನಿಕ ಸಾಹಿತ್ಯದ ಪ್ರವೃತ್ತಿಗಳು, ವಿವಿಧ ಸಾಹಿತ್ಯ ಪ್ರಕಾರಗಳ ವಿಶಿಷ್ಟತೆ, ಹಾಗೂ ಉತ್ತಮ ಸಾಹಿತ್ಯ ರಚನೆಗೆ ಅಗತ್ಯವಾದ ತಂತ್ರಗಳು ಮತ್ತು ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮತ್ತು ಮನದಟ್ಟು ಆಗುವಂತೆ ವಿವರಿಸಿದರು.

ಈ ಕಾರ್ಯಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲ ಜೋಸ್ಟಾನ್ ಲೋಬೊ, ಸಂಸ್ಥೆಯ ಸಂಯೋಜಕ ಯಶವಂತ ಜಿ. ನಾಯಕ್ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸಾಹಿತ್ಯ ಆಸಕ್ತಿ ಮತ್ತು ಕೌಶಲ್ಯವನ್ನು ಉತ್ತೇಜಿಸಿದರು.

ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ, ಕನ್ನಡ ಭಾಷಾ ನೈಪುಣ್ಯ, ಸಾಹಿತ್ಯದ ಅರ್ಥೈಸುವ ಸಾಮರ್ಥ್ಯ ಮತ್ತು ಬರವಣಿಗೆಯ ಕೌಶಲ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸಿತು.

LEAVE A REPLY

Please enter your comment!
Please enter your name here