ಪ್ರತಿಭಾ ಕಾರಂಜಿಯಲ್ಲಿ ಪೆರ್ಲ ಸ. ಉ. ಹಿ. ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

0

ಶಿಬಾಜೆ: ನ. 18ರಂದು ಕುಂಟಾಲಪಳಿಕೆಯಲ್ಲಿ ನಡೆದ ಪೆರ್ಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪೆರ್ಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿರುತ್ತಾರೆ.

ಕಿರಿಯ ವಿಭಾಗದಲ್ಲಿ: ಛದ್ಮವೇಷ – ಅದ್ವಿತ್ ಪ್ರಥಮ, ಕ್ಲೇ ಮಾಡೆಲಿಂಗ್ – ಅದ್ವಿತ್ ದ್ವಿತೀಯ, ಕಥೆ ಹೇಳುವುದು – ಪ್ರಣವ್ಯ ದ್ವಿತೀಯ ಸ್ಥಾನವನ್ನು ಹಾಗೂ
ಹಿರಿಯ ವಿಭಾಗದಲ್ಲಿ: ಕನ್ನಡ ಪ್ರಬಂಧ – ಪ್ರೇಕ್ಷಾ ಪ್ರಥಮ, ಇಂಗ್ಲಿಷ್ ಕಂಠಪಾಠ – ತನ್ಮಯ್ ಪ್ರಥಮ, ಹಿಂದಿ ಕಂಠಪಾಠ – ಕೀರ್ತಿಕಾ ಪ್ರಥಮ, ಅಭಿನಯಗೀತೆ – ಸುವೀಕ್ಷಾ ಪ್ರಥಮ, ದೇಶ ಭಕ್ತಿಗೀತೆಯಲ್ಲಿ ಗಾಯನ ಪ್ರಥಮ, ಕನ್ನಡ ಕಂಠಪಾಠ -ಪ್ರೇಕ್ಷಾ ದ್ವಿತೀಯ, ಕವನ ವಾಚನ – ಕೀರ್ತಿಕಾ ದ್ವಿತೀಯ, ಚಿತ್ರಕಲೆ – ಕೌಶಿಕ್ ತೃತೀಯ, ಹಾಗೂ ಆಶುಭಾಷಣ – ಸುವೀಕ್ಷಾ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಮಂಜುನಾಥ ಎಂ. ಎಸ್, ಮಧುಶ್ರೀ ಕೆ., ಲೋಲಾಕ್ಷಿ.ಎಸ್, ಹೇಮಾವತಿ ಮತ್ತು ರೋಹಿಣಿ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here