






ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶಾಸಕ ಹರೀಶ್ ಪೂಂಜ ಅವರನ್ನು ಭೇಟಿ ಮಾಡಿ ಕುಶಲೋಪಚಾರಿ ಮಾತುಕತೆ ನಡೆಸಲಾಯಿತು. ತನ್ನ ವಾಗ್ದಾನದಂತೆ ವಿಶೇಷ ಅನುದಾನದಲ್ಲಿ ರೂ.1 ಕೋಟಿ ಅನುದಾನವನ್ನು ಮೀಸಲಿರಿಸುವುದಾಗಿ ಶಾಸಕರು ಸಂಪೂರ್ಣ ಭರವಸೆಯನ್ನು ನೀಡಿದರು. ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಪದ್ಮ ಗೌಡ, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಪ್ರಜ್ವಲ್, ತಣ್ಣೀರುಪoತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುನೀಲ್ ಗೌಡ ಅನಾವು, ತಾಲೂಕು ಸಂಘದ ನಿರ್ದೇಶಕರಾದ ಮಾಧವ ಗೌಡ, ದಿನೇಶ್ ಗೌಡ ಕೊಯ್ಯೂರು, ವಿ.ಜಿ. ವಸಂತ್ ಗೌಡ ನಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ಗೌಡ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಕೌಡಂಗೆ, ನಿತಿನ್ ಕಲ್ಮoಜ, ಭರತ್ ಪುದುವೆಟ್ಟು, ಪ್ರದೀಪ್ ನಾಗಾಜೆ ನಾವೂರು, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಬಂದಾರು ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ ಉಪಸ್ಥಿತರಿದ್ದರು.









