




ಶಿಬರಾಜೆ: ಅರಸಿನಮಕ್ಕಿಯಿಂದ ಶಿಬರಾಜೆ ಬರುವ ಮಾರ್ಗ ಮದ್ಯದ ಪರಪ್ಪು ತಿರುವಿನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಡಾಮರ್ ಎದ್ದು ದೊಡ್ಡ ದೊಡ್ಡ ಗಾತ್ರದ ಜಲ್ಲಿ ಕಲ್ಲು ಮಾರ್ಗ ಪೂರ್ತಿ ಆವರಿಸಿಕೊಂಡಿದ್ದು, ಸವಾರರು ವಾಹನ ಓಡಿಸಲು ಪರದಾಡುವ ಪರಿಸ್ಥಿತಿ ಎದುರಾಗಿದೆ.



ಕಳೆದ ಬಾರಿ ಮಳೆಗಾಲ ಮುಗಿದ ಬಳಿಕ ಇಲ್ಲಿಯ ಸ್ಥಳೀಯರು ಮಣ್ಣು ತಂದು ಸವರಿ ತಕ್ಕ ಮಟ್ಟಿಗೆ ರಸ್ತೆ ಸರಿ ಪಡಿಸಿದ್ದರೂ. ಈ ಬಾರಿಯ ಮಳೆಗೆ ಆ ಮಣ್ಣು ಕೊಚ್ಚಿ ಹೋಗಿ ಮತ್ತೆ ಮೊದಲಿನ ಪರಿಸ್ಥಿತಿ ಉಂಟಾಗಿದೆ. ಸದ್ಯಕ್ಕೆ ಸ್ಥಳೀಯರು ಡಾಮರು ಎದ್ದಿರುವ ಕಡೆಯಾದರು ಪ್ಯಾಚ್ ವರ್ಕ್ ಮಾಡಿಸಿದರೆ ಇಲ್ಲಿ ಬಿದ್ದು ಕೈಕಾಲು ಮುರಿದು ಕೊಳ್ಳುವುದು ತಪ್ಪುತ್ತದೆ ಎನ್ನುತ್ತಿದ್ದಾರೆ.









