ಬೆಳ್ತಂಗಡಿ: ರೋಟರಿ ಕ್ಲಬ್ ಸದಸ್ಯರಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ರೂ. 3.80ಲಕ್ಷ ಕೊಡುಗೆ

0

ಬೆಳ್ತಂಗಡಿ: ರೋಟರಿ ಕ್ಲಬ್ ಸದಸ್ಯ ರೊ. ತ್ರಿವಿಕ್ರಮ ಹೆಬ್ಬಾರರು ಅಳದಂಗಡಿಯ ಸೂಳೆಬೆಟ್ಟಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಾಂಗಣಕ್ಕೆ ಇಂಟರ್ ಲಾಕ್ ಅಳವಡಿಸಲು ಸುಮಾರು 3.80 ಲಕ್ಷ ರೂ. ಗಳನ್ನು ರೋಟರಿ ಕ್ಲಬ್ ಮೂಲಕ ದೇಣಿಗೆ ನೀಡಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರಕಾಶ ಪ್ರಭುರವರ ಸಮ್ಮುಖದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೊ. ತ್ರಿವಿಕ್ರಮ ಹೆಬ್ಬಾರ ಮತ್ತು ವೀಣಾ ಹೆಬ್ಬಾರ ದಂಪತಿಗಳು ಚೆಕ್ ನ್ನು ಅಲ್ಲಿನ ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ದೆ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಯ ರೋ. ಶ್ರೀಕಾಂತ ಕಾಮತ್, ಆ್ಯನ್ ಗೀತಾ ಪ್ರಕಾಶ ಪ್ರಭು ಉಪಸ್ಥಿತರಿದ್ದರು. ಅರ್ಚಕ ಬರ್ವೆಯವರು ಸ್ವಾಗತ ಮಾಡಿ, ಶ್ರೀ ದೇವರ ಪ್ರಸಾದವನ್ನು ಸರ್ವರಿಗೂ ನೀಡಿದರು. ಅದೇ ರೀತಿ ಹೆಬ್ಬಾರ ದಂಪತಿಗಳು ಕಾಜಿಮುಗೇರಿನಲ್ಲಿರುವ ಶ್ರೀ ಗೋಪಾಲ ಕೃಷ್ಣ ದೇವಳಕ್ಕೆ ಸುಮಾರು 1.5 ಲಕ್ಷದಷ್ಟು ಕೊಡುಗೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here