





ಕಲ್ಮಂಜ: ಸಿದ್ದಬೈಲು ಅಂಗನವಾಡಿಯಲ್ಲಿ ನ. 14ರಂದು ಪುಟಾಣಿ ಯಶಿಕ್ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳೆಲ್ಲರೂ ಮಕ್ಕಳಿಗೆ ಶುಭಹಾರೈಸಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೋಲಿಸ್ ಇಲಾಖೆ ಮೋಹಿನಿ, ಸಾಕ್ಷರತಾ ಸಂಪನ್ಮೂಲ ಸಮಾಲೋಚಕಿ ಉಷಾ, ಸಮುದಾಯ ಆರೋಗ್ಯ ಅಧಿಕಾರಿ ರಂಜಿತಾ, ಶಾಲಾ ಮುಖ್ಯ ಶಿಕ್ಷಕಿ ಧರ್ಣಮ್ಮ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ, ಶಾಲಾ ಎಸ್. ಡಿ. ಎಂ. ಸಿ ಅದ್ಯಕ್ಷ ದಿನೇಶ್ ಗೌಡ, ಮುತ್ತೂಟ್ ಫೈನಾನ್ಸ್ ಅಸಿಸ್ಟೆಂಟ್ ಮ್ಯಾನೇಜರ್ ನವೀನ್ ಗುಡಿಗಾರ್, ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷ ರಾಘವ್ ಕಲ್ಮಂಜ, ಪಂಚಾಯತ್ ಸದಸ್ಯರಾದ ಪ್ರವೀಣ್ ಕರಿಯನೆಲ, ಸ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ವಸಂತಿ ಅಂಗನವಾಡಿ ಕಾರ್ಯಕರ್ತೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪವಿತ್ರ ಸ್ವಾಗತಿಸಿ, ಧನ್ಯವಾದವಿತ್ತರು.









