ಬಿಹಾರ ಚುನಾವಣೆ ಎನ್.ಡಿ.ಎ ಮೈತ್ರಿಕೂಟಕ್ಕೆ ಗೆಲುವು- ಉಜಿರೆ ಬಿಜೆಪಿ ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ

0

ಉಜಿರೆ: ಬಿಹಾರದ 243 ವಿಧಾನಸಭಾ ಕ್ಷೇತ್ರದಲ್ಲಿ 207 ಸ್ಥಾನವನ್ನು ಪಡೆದು ಬಿಜೆಪಿ ಆಡಳಿತದ ಚುಕ್ಕಾನಿ ಹಿಡಿದಿದೆ, ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ಮಹಾಘಟಬಂಧನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ಎರಡೂ ಮೈತ್ರಿಕೂಟಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ.ಇದೀಗ ಎನ್‌ಡಿಎ ಸರ್ಕಾರವು ಸ್ಪಷ್ಟ ಬಹುಮತವನ್ನು ಪಡೆದ ಹಿನ್ನೆಲೆಯಲ್ಲಿ ಉಜಿರೆ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ನ. 14 ರಂದು ಉಜಿರೆ ಬಸ್ ನಿಲ್ದಾಣ ಬಳಿ ಸಂಭ್ರಮಾಚರಣೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಬರಮೇಲು ಪ್ರಮುಖರಾದ ಕೇಶವ ಭಟ್, ಅರವಿಂದ್ ಕಾರಂತ್, ಜಯಂತ್ ನಮನ ಬೇಕರಿ, ಶಶಿಧರ ಕಲ್ಮಂಜ, ಶಶಿಕಲಾ, ದೇವಪ್ಪ ಗೌಡ, ಜಗನ್ನಾಥ್ ರೈ, ಸಚಿನ್, ಪುಷ್ಪಾವತಿ, ಸುಧೀರ್, ರಕ್ಷಿತ್, ಬಾಲಚಂದ್ರ, ವಿಶ್ವನಾಥ್, ಪ್ರವೀಣ್ ಉಕ್ರಮ್ ಪಟೇಲ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here