ನ.16: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನ.16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಕ್ಕಳ ರೋಗ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 14 ವರ್ಷದೊಳಗಿನ ಎಲ್ಲಾ ಮಕ್ಕಳ ರೋಗ ತಪಾಸಣೆ ಉಚಿತವಾಗಿ ನಡೆಸಲಾಗುವುದು.

ಅಸ್ತಮ, ಉಬ್ಬಸ ಅತಿಸಾರ (ಅತಿಭೇದಿ), ಮಲಬದ್ಧತೆ, ಜ್ವರ, ಅಲರ್ಜಿ, ರ್‍ಯಾಶಸ್ (ದದ್ದುಗಳು), ಚರ್ಮದ ಸೋಂಕು, ಕೆಮ್ಮು, ಕಫ, ಹೊಟ್ಟೆ ನೋವು, ಹಲ್ಲುನೋವು, ಕಟ್ಟಿಕೊಳ್ಳುವ ಮೂಗು, ವಾಕರಿಕೆ ಮತ್ತು ವಾಂತಿ, ಪೌಷ್ಟಿಕಾಂಶದ ಕೊರತೆ, ಮೂರ್ಛೆರೋಗ, ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ, ಜಾಂಡೀಸ್, ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು. ಮಕ್ಕಳರೋಗ ತಜ್ಞ ಡಾ| ಪ್ರತೀತ್, ಡಾ| ನಿಖಿತಾ
ಮಿರ್ಲೆ, ಡಾ| ಅರ್ಚನಾ ಕೆ.ಎಂ. ಅವರು ಮಕ್ಕಳ ರೋಗ ತಪಾಸಣೆ ನಡೆಸಲಿದ್ದಾರೆ. ಹೆಸರು ನೊಂದಾಯಿಸಿಕೊಳ್ಳಲು 7760397878 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here