







ಬೆಳ್ತಂಗಡಿ: ಎಂ.ಜಿ. ತಲ್ಹತ್ ಸವಣಾಲು ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ಮುಡಿಪು ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ನ.1ರಂದು ವಿಜೃಂಭಣೆಯಿಂದ ಹಾಗೂ ಸಂಭ್ರಮಭರಿತವಾಗಿ “ಬೇಧಗಳನ್ನೆಲ್ಲಾ ಬಿಟ್ಟು, ಜ್ಞಾನ–ಸಂಸ್ಕೃತಿ–ಕನ್ನಡದ ಹಾದಿಯಲ್ಲಿ ಒಂದಾಗಿ ನಡೆಯೋಣ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಬೆಳ್ತಂಗಡಿ ಮತ್ತು ಮುಡಿಪು ಎರಡೂ ಕ್ಯಾಂಪಸ್ಗಳಲ್ಲಿ ಕನ್ನಡದ ನುಡಿಮುತ್ತುಗಳು, ನೃತ್ಯ, ನಾಟಕ, ವಚನಗಳು ಹಾಗೂ ವಿದ್ಯಾರ್ಥಿಗಳಿಂದ “ಕನ್ನಡ ನಮ್ಮ ಹೆಮ್ಮೆ” ಎಂಬ ಘೋಷಣೆಯೊಂದಿಗೆ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಸಡಗರದ ವಾತಾವರಣ ನಿರ್ಮಾಣವಾಯಿತು.
ಬೆಳ್ತಂಗಡಿ ಕ್ಯಾಂಪಸ್ ಕಾರ್ಯಕ್ರಮ: ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಪ್ರಾಂಶುಪಾಲ ಎಂ.ಜಿ. ತಲ್ಹತ್ ಸವಣಾಲು ಅವರ ಮಾರ್ಗದರ್ಶನದಂತೆ ಬೆಳ್ತಂಗಡಿ ಕ್ಯಾಂಪಸ್ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಜೆಸಿಐ ಮಂಜುಶ್ರೀ ಬೆಳ್ತಂಗಡಿ ಅಧ್ಯಕ್ಷೆ ಆಶಾಲತಾ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸಂಸ್ಥೆಯ ನಿರ್ದೇಶಕ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿ, ಕನ್ನಡ ರಾಜ್ಯೋತ್ಸವದ ವಿಶೇಷ ಭಾಷಣ ನೀಡುತ್ತ, “ವಿದ್ಯಾರ್ಥಿಗಳ ಜೀವನದಲ್ಲಿ ಕನ್ನಡದ ಪ್ರೀತಿ ಮತ್ತು ಗೌರವ ಇರುವುದು ನಿಜವಾದ ಶಿಕ್ಷಣದ ಅರ್ಥವನ್ನು ಹೇಳುತ್ತದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫೈರ್ ಅಂಡ್ ಸೇಫ್ಟಿ ವಿಭಾಗದ ಮುಖ್ಯ ಶಿಕ್ಷಕಿ ಅಂಕಿತ, ಶಿಕ್ಷಕ ಪ್ರದೀಪ್ ಕುಮಾರ್, ಹಾಗೂ ಮ್ಯಾನೇಜರ್ ಶಮೀಮಾ ನೆರಿಯ ಅವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿದರು.



ವಿದ್ಯಾರ್ಥಿಗಳಿಂದ “ಕನ್ನಡದ ನಾದ, ಕನ್ನಡದ ಹಾಡು” ಎಂಬ ವಿಷಯದ ನೃತ್ಯ, ನಾಟಕ ಮತ್ತು ಪೋಸ್ಟರ್ ಪ್ರದರ್ಶನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮುಡಿಪು ಕ್ಯಾಂಪಸ್ ಕಾರ್ಯಕ್ರಮ: ಮುಡಿಪು ಕ್ಯಾಂಪಸ್ನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೂ ಅದೇ ಉತ್ಸಾಹ ಮತ್ತು ಉಲ್ಲಾಸದಿಂದ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಆಟೋ ರಾಜಕುಮಾರ್ ಯುನಿಯನ್ ಅಧ್ಯಕ್ಷ ಸಿದ್ದೀಕ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲ ಎಂ.ಜಿ. ತಲ್ಹತ್ ಸವಣಾಲು ಅವರು “ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಕನ್ನಡದ ಬಳಕೆ ಮತ್ತು ಗೌರವದಿಂದ ಮಾತ್ರ ನಿಜವಾದ ಪ್ರಗತಿ ಸಾಧ್ಯ” ಎಂಬ ಸಂದೇಶ ನೀಡಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಸಂಸ್ಥೆಯ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಅವರು ಬೆಳ್ತಂಗಡಿ ಮತ್ತು ಮುಡಿಪು ಕ್ಯಾಂಪಸ್ಗಳಿಗೆ ವಿಶಿಷ್ಟ ಮಾರ್ಗದರ್ಶನ ನೀಡಿ ಕನ್ನಡ ಸಂಸ್ಕೃತಿಯ ಅರಿವು ಮೂಡಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಕಾರ್ಯಕ್ರಮದ ವಿಶೇಷತೆಗಳು: ಕಾರ್ಯಕ್ರಮದಲ್ಲಿ “ನಮ್ಮ ನುಡಿ ನಮ್ಮ ನಾಡು” ಎಂಬ ವಿಷಯದ ಕುರಿತ ವಿದ್ಯಾರ್ಥಿಗಳ ನಾಟಕ, “ಜಯ ಭಾರತ ಜನನಿಯ ತನುಜಾತೆ” ಪದ್ಯಗಾನ, ಹಾಗೂ “ಕನ್ನಡ ಆಕರ್ಷಣೀಯವಾದ ವಿಶೇಷ ಪ್ರದರ್ಶನಗಳು ವಿಶೇಷ ಆಕರ್ಷಣೆ ಆಗಿದ್ದವು.

ಸಂಸ್ಥೆಯ ಹಿರಿಯ ಫ್ಯಾಕಲ್ಟಿ ಆಗಿರುವ ಫ್ಯಾಶನ್ ಡಿಸೈನಿಂಗ್ ವಿಭಾಗದ ಶಿಕ್ಷಕಿ ಅಕ್ಷತಾ, ಎ.ಸಿ. ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ ವಿಭಾಗದ ಮೆಲ್ವಿನ್, ಕಂಪ್ಯೂಟರ್ ವಿಭಾಗದ ತಾನ್ಸಿಯ, ಹಾಗೂ ಟೀಚರ್ ಟ್ರೈನಿಂಗ್ ವಿಭಾಗದ ಶೈಮಾ ಅವರು ತಮ್ಮ ವಿಭಾಗದ ವಿದ್ಯಾರ್ಥಿಗಳನ್ನು ಮುನ್ನಡೆಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಬೆಳ್ತಂಗಡಿ ಹಾಗೂ ಮುಡಿಪು ಎರಡೂ ಕ್ಯಾಂಪಸ್ಗಳ ವಿದ್ಯಾರ್ಥಿಗಳು ಕನ್ನಡದ ಹಬ್ಬವನ್ನು ಹೃದಯಪೂರ್ವಕವಾಗಿ ಆಚರಿಸಿ, “ನಾವು ಕನ್ನಡಿಗರು — ನಮ್ಮ ಗುರುತೇ ಕನ್ನಡ” ಎಂಬ ಘೋಷಣೆಯೊಂದಿಗೆ ಕನ್ನಡಾಭಿಮಾನವನ್ನು ಹಬ್ಬದಂತೆ ಸಂಭ್ರಮಿಸಿದರು.









