


ಬಳಂಜ: ಶಾಲೆಯ ಅಮೃತ ಮಹೋತ್ಸವಕ್ಕೆ ಸಹಕಾರ ಹಾಗೂ ಸರ್ಕಾರ ಮಟ್ಟದಲ್ಲಿ ಅನುದಾನ ದೊರಕಿಸಿಕೊಡಲು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರನ್ನು ಅ. 30ರಂದು ಭೇಟಿಯಾಗಿದ್ದರು. ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೇಲ್ಯ, ಅಧ್ಯಕ್ಷ ಚಂದ್ರಶೇಖರ್ ಪಿ.ಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಚಂದ್ರಮ, ಬೆಳ್ತಂಗಡಿ ಕಿರಿಯ ಅಭಯಂತರ ಸೂರಜ್ ಕೋಟ್ಯಾನ್ ಹಾನಿಂಜ (ಇಂಜಿನಿಯರ್), ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಿನೇಶ್ ಪಿ.ಕೆ., ಮುಖಂಡರಾದ ರಮಾನಾಥ ಶೆಟ್ಟಿ, ಸತೀಶ್ ದೇವಾಡಿಗ, ಡೀಕಯ್ಯ ಕೆ. ದೀಪಕ್ ಎಚ್. ಡಿ., ಪುರಂದರ ಪೂಜಾರಿ ಪೇರಾಜೆ, ಸುರೇಶ್ ಹೇವ, ಜಗದೀಶ್ ಪೇರಾಜೆ, ಅಶ್ವಿನ್ ಕುಮಾರ್ ಹಾಗೂ ಇತರರು ಹಾಜರಿದ್ದರು.


ಶಾಲೆಯ ಮುಂದಿನ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಬೇಡಿಕೆಗಳ ಬಗ್ಗೆ, ಶಾಲಾ ಕಟ್ಟಡ ಕೊಠಡಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪಿಸುವ ಮತ್ತು ಶೌಚಾಲಯ ನಿರ್ಮಾಣ ಕುರಿತು ಸರಕಾರಕ್ಕೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಲು ಕೊರಲಾಯಿತು.. ವಿಧಾನ ಸಭೆಯ ಸ್ಪೀಕರ್, ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಕೋರಲಾಯಿತು. ರಕ್ಷಿತ್ ಶಿವರಾಂ ಅವರು ಶಾಲೆಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.


 
            
