




ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಬೆಳ್ತಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಒಟ್ಟು 17 ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
- ಅಲ್ ಸ್ಟನ್ ಡಿಸಿಲ್ವ (10ನೇ) 200ಮೀ. 400ಮೀ. 800ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್
- ತ್ರಿಶಾ ಗೋವಿಯಸ್ (7ನೇ) ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ.
- ವೀವನ್ ಪಿಂಟೋ (10ನೇ) 1500ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
- ಪ್ರಣವ್ (8ನೇ) ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ.
- ಅಲ್ ಸ್ಟನ್ ಡಿಸಿಲ್ವ (10ನೇ), ರೇಹಾಂತ್ (10ನೇ), ವೀವನ್ ಪಿಂಟೋ (10ನೇ) , ಜೊವಿನ್ ಮಸ್ಕರೇನಸ್ (10ನೇ) ಪ್ರೌಢಶಾಲಾ ಮಟ್ಟದ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
- ಸ್ಪಂದನ್ ವಿ ಜೆ (8ನೇ) 100ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ 600ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
- ಮೊಹಮ್ಮದ್ ಶಾಹಿಲ್ (8ನೇ) ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ.
- ಅನನ್ಯ (9ನೇ) ಹಾರ್ಡ್ಲ್ಸ್ ನಲ್ಲಿ ದ್ವಿತೀಯ ಸ್ಥಾನ.
- ಸಾವಿಯೋನ್ ಅರ್ವಿನ್ ಮೋನಿಸ್ (8ನೇ) ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ.
- ಟ್ರಿಪ್ಲ್ ಜಂಪ್ ನಲ್ಲಿ ಆಡ್ಲಿನ್ ರೀವಾ ಪಿರೇರಾ (9ನೇ) ತೃತೀಯ ಸ್ಥಾನ.
- ಮನ್ವಿತ್ (9ನೇ) ಗುಂಡೆಸೆತದಲ್ಲಿ ತೃತೀಯ ಸ್ಥಾನ.
- ಜೊವಿನ್ ಮಸ್ಕರೇನಸ್ 800ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
- ರೆಹಾಂತ್ (10ನೇ) 100ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕ ಸಂದೀಪ್ ಕುಮಾರ್ ಅವರು ಕ್ರೀಡಾ ತರಬೇತಿಯನ್ನು ನೀಡಿರುತ್ತಾರೆ.









