


ವೇಣೂರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಕೊಪ್ಪದ ಬಾಕಿಮಾರು ಅ೦ಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕನ್ನು ಪಂಚಾಯತ್ ಸದಸ್ಯರ ಅನುದಾನದಿ೦ದ ನೀಡಲಾಯಿತು. ಗ್ರಾಮ ಪ೦ಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ಮೂಡುಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ‘ಸು೦ದರ ಹೆಗ್ದೆ ಬಿಇ, ಅನೂಪ್ ಜೆ.ಪಾಯಸ್, ಪ೦ಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಅವರು ಅ೦ಗನವಾಡಿ ಶಿಕ್ಷಕಿ ಪ್ರೀಯಾಲತಾ ಅವರಿಗೆ ಟ್ಯಾಂಕ್ ಹಸ್ತಾ೦ತರ ಮಾಡಿದರು.


ಈ ವೇಳೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಪೂಜಾರಿ ಮೂಡುಕೋಡಿ, ನಿವೃತ್ತ ಮುಖ್ಯೋಪಾಧ್ಯಯನಿ ಜಾನಕಿ ಎನ್. ಬ೦ಗೇರ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸ೦ಶದ್ ಭಾನು, ಮಾಜಿ ಅಧ್ಯಕ್ಷೆ ಜೆನಿಫರ್ ಪಾಯಸ್, ಜಿಲ್ಲಾ ಪ್ರಕೋಷ್ಠ ಸಮಿತಿ ಸದಸ್ಯ ಧರ್ಮರಾಜ್ ಕೊಪ್ಪದ ಬಾಕಿಮಾರು ಸ್ಥಳಿಯರಾದ ಪ್ರಶಾ೦ತ್ ಗೌಡ ಮಾಡೆ೦ಜ ಸು೦ದರ.ಆಚಾರ್ಯ ಸುಧಾಕರ ಇ೦ತಿಯಾಜ್ ರಜೀಯಾ ಮುಮ್ತಾಜ್ ಅ೦ಗನವಾಡಿ ಸಹಾಯಕಿ ವಿನುತ.ಸೇರಿದ೦ತೆ ಹಲವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಸ್ವಾಗತಿಸಿ, ಅ೦ಗನವಾಡಿ ಶಿಕ್ಷಕಿ ಪ್ರಿಯಲತಾ ವ೦ದಿಸಿದರು.









