ಊಟಕ್ಕಿಲ್ಲದ ಉಪ್ಪಿನಕಾಯಿಯಾದ ನೆರಿಯ ಬಿ.ಎಸ್.ಎನ್.ಎಲ್. ಟವರ್

0

ನೆರಿಯ: ನೆಟ್ವರ್ಕ್ ಸಮಸ್ಯೆಯಿಂದ ಪರದಾಡುತ್ತಿದ್ದ ಸಂದರ್ಭದಲ್ಲಿ ನೆರಿಯ ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣವಾಗಿ ಸಮಸ್ಯ ದೂರವಾಗಿತ್ತು ಆರಂಭದ ದಿನಗಳಲ್ಲಿ ಉತ್ತಮವಾದ ಸೇವೆಯನ್ನು ಗ್ರಾಹಕರಿಗೆ ಸಿಗುತ್ತಿತ್ತು. ಇದೀಗ ಸುಮಾರು ವರ್ಷಗಳಿಂದ ಬಿ.ಎಸ್.ಎನ್.ಎಲ್. ಟವರ್ ಊಟಕ್ಕಿಲ್ಲದ ಉಪ್ಪಿನಕಾಯಿ ಅಂತಾಗಿದೆ.

ನೆಟ್ವರ್ಕ್ ಇಲ್ಲದೆ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ ನೆರಿಯ ಕಚೇರಿಯಲ್ಲಿ ಸಿಬ್ಬಂದಿ ಕೂಡ ಇಲ್ಲ ವೈಫೈ ಕೇಬಲ್ ಸಮಸ್ಯೆ ಇದಾಗ ಮಾತ್ರ ಭೇಟಿ ಸ್ಪಂದನೆ ನೀಡುತ್ತಾರೆ. ಉಪಯೋಗವಿಲದ ಟವರ್ ಯಾಕೆ ಬೇಕು. ಸರಕಾರದಿಂದ ಸಿಗುವ ಸೌಲಭ್ಯವನ್ನು ಅಧಿಕಾರಿಗಳು ತಡೆ ಮಾಡುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತು. ಬಿ.ಎಸ್.ಎನ್.ಎಲ್. ಟವರ್ ಸರಿಯಾದ ನಿರ್ವಾಹಣೆ ಇಲ್ಲದೆ ಬೇರೆ ಖಾಸಗಿ ಕಂಪೆನಿಗಳ ಮೊರೆ ಹೋಗಬೇಕಾಗಿದೆ. ಪಂಚಾಯತ್ ಮುಂಬಾಗವೇ ಇರುವ ಟವರ್ ವಿಪರ್ಯಾಸವೆಂದರೆ ನೆರಿಯ ಗ್ರಾಮ ಪಂಚಾಯತ್ ಮುಂದೆ ಬಿಎಸ್ಎನ್ಎಲ್ ಟವರ್ ಹಾಗೂ ಅದರ ಕಚೇರಿ ಕೂಡ ಪಂಚಾಯತ್ ಕಟ್ಟಡದಲ್ಲಿ ಇದ್ದು ಯಾವುದೇ ಪ್ರಯೋಜನವಿಲ್ಲ. ಗ್ರಾಮ ಸಭೆಯಲ್ಲಿ ಮನವಿ ಕೂಡ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವುದಿಲ್ಲ. ಇನ್ನು ಆದರೂ ಟವರ್ ಕಡೆ ಗಮನ ಹರಿಸುತ್ತರ ಎಂದು ಕಾದು ನೋಡಬೇಕಾಗಿದೆ.

ಕರೆಂಟ್ ಇದ್ದರೆ ಮಾತ್ರ ನೆಟ್ವರ್ಕ್: ಯಾವುದೇ ಟವರ್ ಇರುವ ಸ್ಥಳದಲ್ಲಿ ಜನರೇಟರ್ ವ್ಯವಸ್ಥೆ ಇರುತ್ತದೆ. ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾದ ವ್ಯವಸ್ತೆ ಇತ್ತು ಇದೀಗ ಕರೆಂಟ್ ಇದ್ದಾಗ ಮಾತ್ರ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಕರೆಂಟ್ ಹೋದ ಮೇಲೆ ಜನರೇಟರ್ ನಿರ್ವಹಣೆ ಇಲ್ಲದೆ ನೆಟ್ವರ್ಕ್ ಸರಕಾರದ ಸೇವೆಗೆ ಓಟಿಪಿ ಬರುವಾಗ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದೆ.
ಬಿ.ಎಸ್.ಎನ್.ಎಲ್. ನಂಬರ್ ಹೊಂದಿರುವ ಗ್ರಾಹಕರು ಕಕ್ಕಿಂಜೆ ಟವರ್ ನ ವ್ಯಾಪ್ತಿಗೆ ಹೋಗಿ ಓಟಿಪಿ ಹೇಳುವ ಪರಿಸ್ಥಿತಿ ಉಂಟಾಗಿದೆ.

ಕಕ್ಕಿಂಜೆಯಿಂದ ನೆರಿಯಕ್ಕೆ ವೈಫೈ ಕೇಬಲ್: ಗ್ರಾಮದಲ್ಲಿ ದೇವಗಿರಿ ಗಂಡಿಬಾಗಿಲು ಅಂಬಟೆ ಮಲೆ ಅಂತಹ ಪ್ರದೇಶಗಳಿಗೆ ಅಣಿಯೂರುನಲ್ಲಿ ಏರ್ಟೆಲ್ ಟವರ್ ಇದ್ದರೂ ಕೂಡ ಆ ಪ್ರದೇಶಗಳಿಗೆ ನೆಟ್ವರ್ಕ್ ಸಂಪರ್ಕವಿಲ್ಲ. ಕಕ್ಕಿಂಜೆಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಮೂಲಕ ನೆರಿಯ ಗ್ರಾಮಕ್ಕೆ ವೈಫೈ ಯು ಕೇಬಲ್ ಮೂಲಕ ನೆಟ್ವರ್ಕ್ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here