ನಿಡ್ಲೆ: ಕುದ್ರಾಯ ಬಸ್ಸು ತಂಗುದಾಣದ ಅಂಗಡಿ ಬಳಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಅ.12ರಂದು ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ್ದಾರೆ.
ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿದ್ದ 90 ಎಂ.ಎಲ್ ಪರಿಮಾಣದ ಒಟ್ಟು 36 ಪ್ಯಾಕೆಟ್ ಮೈಸೂರು ಲ್ಯಾನ್ಸರ್ ವಿಸ್ಕಿ ಪತ್ತೆಹಚ್ಚಿದ್ದಾರೆ.
ಪೊಲೀಸರು 1800 ರೂ. ಮೌಲ್ಯದ 3.240 ಲೀಟರ್ ಮದ್ಯವನ್ನು ವಶ ಪಡಿಸಿಕೊಂಡಿದ್ದಲ್ಲದೆ, ಆರೋಪಿ ಕಾಯರ್ತಡ್ಕ ಕಳಂಜ ಗ್ರಾಮದ ನಿವಾಸಿ ಶಾಂತಪ್ಪ(51) ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.