ಉಜಿರೆ: ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಮೆಸ್ಕಾಂ ಅಧ್ಯಕ್ಷ ಹರೀಶ ಕುಮಾರ್ ಅವರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಅವರನ್ನು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸುರ್ಯ ಗುತ್ತು ಅಭಿನಂದಿಸಿದರು. ಬಿ. ರಾಜಶೇಖರ ಅಜ್ರಿ, ಅರ್ಚಕ ಪ್ರಕಾಶ್ ಭಟ್, ಪ್ರವೀಣ್ ವಿ.ಜಿ. ಉಪಸ್ಥಿತರಿದ್ದರು.