ಉಜಿರೆ: ಕಾಲೇಜಿನ ಕನ್ನಡ ವಿಭಾಗದಿಂದ ದ್ವಿತೀಯ ವರ್ಷದ ಕನ್ನಡ ವಿದ್ಯಾರ್ಥಿಗಳಿಗೆ ಗಮಕ ಕಾರ್ಯಕ್ರಮ ಆಯೋಜಿಸಲಾಯಿತು. ದ್ವಿತೀಯ ವರ್ಷದ ಪಠ್ಯ ಭಾಗದಲ್ಲಿ ಬರುವ, ಕವಿ ಕುಮಾರವ್ಯಾಸ ರಚಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಕಾವ್ಯ ಭಾಗವನ್ನು ಗಮಕ ಶೈಲಿಯಲ್ಲಿ ಪ್ರಸ್ತುತ ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸುವರ್ಣ ಕುಮಾರಿ ಕೆ. ಆರ್. ಗಮಕ ವ್ಯಾಖ್ಯಾನ ಮಾಡಿದರೆ, ಬೆಳ್ತಂಗಡಿಯ ಸಂಗೀತ ಗುರುಗಳಾಗಿರುವ ಎ. ಡಿ.ಸುರೇಶ್ ಗಮಕ ಗಾಯನ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಿ ಎಂದರು. ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ಉಮೇಶ್ ನಿರೂಪಿಸಿ, ವಂದಿಸಿದರು.