ಧರ್ಮಸ್ಥಳ: ನಿವಾಸಿ ಮಹೇಂದ್ರ ಸಿಂಗ್ (59ವ) ಅಲ್ಪಕಾಲದ ಅಸೌಖ್ಯದಿಂದ ಅ. 4ರಂದು ಮಂಗಳೂರು ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಕಳೆದ 40 ವರ್ಷಗಳಿಂದ ಧರ್ಮಸ್ಥಳ, ಬೆಂಗಳೂರು ಹಾಗೂ ಇತರ ಕಡೆಗಳಿಗೆ ಹೋಗುವ ಪ್ರೈವೇಟ್ ಬಸ್ಸುಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಕವಿತಾ ಬಾಯಿ, ಮಕ್ಕಳಾದ ಯಶವಂತ್ ಸಿಂಗ್ ಮತ್ತು ಪಾಯಲ್ ಸಿಂಗ್, ಅಳಿಯ ಸೂರಜ್ ಪ್ರಸಾದ್ ಅವರನ್ನು ಅಗಲಿದ್ದಾರೆ.