




ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜೆ.ಎಮ್.ಎಫ್ ಸಭಾ ಭವನದಲ್ಲಿ ನಿಕಟ ಪೂರ್ವ ಅಧ್ಯಕ್ಷ ಬಿ.ಶೇಖುಂಞ್ಞ ಅವರು ನೂತನ ಅಧ್ಯಕ್ಷ ಖಾಲಿದ್ ಪುಲಾಬೆ ಅವರಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ನಡೆಯಿತು.


ಹಿರಿಯರಾದ ಅಬ್ದುಲ್ ಲತೀಫ್ ಸಾಹೇಬ್, ಜಮೀಯತುಲ್ ಫಲಾಹ್ ನಡೆದು ಬಂದ ದಾರಿ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ನಿಕಟ ಪೂರ್ವ ಕೋಶಾಧಿಕಾರಿ ಅಬ್ಬೋನು ಮದ್ದಡ್ಕ, ನೂತನ ಪ್ರಧಾನ ಕಾರ್ಯದರ್ಶಿ ಉಮರ್ ಬೆಳ್ತಂಗಡಿ, ಉಪಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ಆಲಿಯಬ್ಬ ಪುಲಾಬೆ, ಪತ್ರಿಕಾ ಕಾರ್ಯದರ್ಶಿ ಇಲ್ಯಾಸ್ ಕರಾಯ, ಕೆ.ಎಸ್. ಅಬ್ದುಲ್ಲಾ, ಉಮರ್ ಕುಂಙಿ ನಾಡ್ಜೆ, ಮಹಮ್ಮದ್ ಉಜಿರೆ, ಎಸ್.ಎಮ್.ಕೋಯ, ಕೆ. ಎಸ್.ಅಬೂಬಕ್ಕರ್ ಮತ್ತು ಖಾಸಿಂ ಕಿಲ್ಲೂರು ಉಪಸ್ಥಿತರಿದ್ದರು.
ಜಮೀಯತುಲ್ ಫಲಾಹ್ ಸದಸ್ಯ ಕತಾರ್ ಹಾಜಿ ಮಹಮ್ಮದ್ ಕುಂಞ್ಞ ಅವರಿಗೆ ತಹಲೀಲ್ ಸಮರ್ಪಿಸಲಾಯಿತು. ಆಲಿಯಬ್ಬ ಪುಲಾಬೆ ಸ್ವಾಗತಿಸಿ, ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ವಂದಿಸಿದರು.









