ಉರುವಾಲು: ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮಹಮ್ಮಾಯಿದೇವಿ ಮತ್ತು ಭೈರವ ಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಅ.5ರಂದು ನಡೆಯಿತು. ತಂತ್ರಿ ಗಣೇಶ್ ಉಜಿರೆ ಅವರ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಪುತ್ತೂರು ತಾಲೂಕು, ಮರಾಠಿ ಸಂಘದ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ, ಭಜನಾ ಮಂಡಳಿಯ ಅಧ್ಯಕ್ಷ, ಊರಿನ ಗಣ್ಯರಾದ ಸುನಿಲ್ ಕುಮಾರ್ ಅಣವು, ರೋಹಿತ್ ಶೆಟ್ಟಿ, ಪ್ರವೀಣ್ ರೈ, ತಾಲೂಕು ಮರಾಠಿ ಸಂಘದ ಅಧ್ಯಕ್ಷ ಸತೀಶ್ ಎಚ್. ಎಲ್., ಚೆನ್ನಕೇಶವ ನಾಯ್ಕ ಶ್ರೀ ಮಹಮ್ಮಾಯಿ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ನಾಯ್ಕ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಶ ಎಚ್. ಎಲ್. ಹಾಗೂ ರಾಘವ ನಾಯ್ಕ ಶ್ರೀ ಜಲದುರ್ಗ ಕಾಯರ್ಪಾಡಿ, ವಿನೋದ್ ನಾಯ್ಕ, ಕಾರ್ಯದರ್ಶಿ ಉಮೇಶ್ ನಾಯ್ಕ, ಕುಶಾಲಪ್ಪ ಮತ್ರ ಕುಮೇರ್, ಗೌರವ ಸಲಹೆಗಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.