ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ದುರ್ಗಾದೇವಿ ಯಕ್ಷಗಾನ ಮಂಡಳಿಯಿಂದ ಕೊಲ್ಲಿ ಕ್ಷೇತ್ರದಲ್ಲಿ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಬಯಲಾಟ ಹಾಗೂ ಸನ್ಮಾನ ಕಾರ್ಯಕ್ರಮ ಜರಗಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ವಹಿಸಿದ್ದರು. ಶ್ರೀಧರ ಪೂಜಾರಿ, ಸೋಮಯ್ಯ ಪೂಜಾರಿ ಬಂಡಾರಿಕೊಡಿ, ಗೋಪಾಲ ಶಾಂತಿಗುಡ್ಡೆ, ಮೀನಾ ಮಾಲೂರು ಸಹಕರಿಸಿದರು. ಕಾರ್ಯಕ್ರಮವನ್ನು ಜಯಂತ್ ಹೆಗ್ಡೆ, ವಿನಯ್ ನಡುಬೈಲು ನಿರೂಪಿಸಿದರು.