ಬೆಳ್ತಂಗಡಿ: ತಾಲೂಕು ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ, ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ 05/12/2025ರಂದು ಧ್ವಜಸ್ತಂಭ ಸ್ಥಾಪನೆಗೆ ಸಿದ್ದಗೊಳಿಸಿದ ಕಲ್ಲಿಗೆ ವಿಜಯ ದಶಮಿಯ ಪುಣ್ಯ ದಿನದಂದು ಕ್ಷೇತ್ರದಿಂದ ಅರ್ಚಕ ರಾಜೇಶ್ ಹೊಳ್ಳ ಅವರು ಕ್ಷೇತ್ರದಿಂದ ತೀರ್ಥ ಪ್ರೋಕ್ಷಣೆ ಹಾಗೂ ಪೂಜೆ ಮಾಡಿ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸುಕನ್ಯಾ ಮತ್ತು ಡಿ. ಜಯರಾಮ್ ರಾವ್ ಮತ್ತು ಮಕ್ಕಳು ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಶಿಲ್ಪಿಗಳಾದ ಸುಧಾಕರ್ ಡೋಂಗ್ರೆ ಮತ್ತು ಶಿಲ್ಪಿ ಬಳಗದವರು ಉಪಸ್ಥಿತರಿದ್ದರು.