ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಆಡಳಿತ ಸಮಿತಿಯ ಒಂಬತ್ತನೇ ಮಹಾಸಭೆಯು ವಿಜಯ ದಶಮಿಯಂದು ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಅಭಿವೃದ್ಧಿ, ಮುಂದಿನ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು. ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಪ್ರಸ್ತಾವಿಸಿ ಸ್ವಾಗತಿಸಿದರು. ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷತೆ ವಹಿಸಿ ನ. 23ರಂದು ಗೆಜ್ಜೆ ಗಿರಿಯಲ್ಲಿ ನಡೆಯುವ ವಸತಿ ಗ್ರಹಗಳ ಶಿಲನ್ಯಾಸ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕೆಂದು ಕರೆ ನೀಡಿದರು. ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಮೋಹನದಾಸ ಬಂಗೇರ. ಲೆಕ್ಕಪತ್ರಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ, ಜೊತೆ ಕಾರ್ಯದರ್ಶಿಗಳಾದ ಡಾ. ಸಂತೋಷ್ ಬೈರಂಪಲ್ಲಿ, ಜಯವಿಕ್ರಮ ಕಲ್ಲಾಪು ಹಾಜರಿದ್ದು, ಗಣ್ಯರಾದ ದುಬೈಯ ಸತೀಶ್ ಪೂಜಾರಿ ಬೆಳಪು, ಪ್ರಭಾಕರ್ ಕರ್ನಿರೆ, ದಕ್ಷಿಣ ಆಫ್ರಿಕದ ಸೋಮನಾಥ ಪೂಜಾರಿ ಉಡುಪಿ ಗೋವಾದ ಚಂದ್ರಹಾಸ ಅಮೀನ್, ಸುಜಿತಾ ವಿ. ಬಂಗೇರ, ಸಂಜೀವ ಪೂಜಾರಿ ಬಿರುವ ಸೆಂಟರ್, ಪ್ರಾಮಲ್ ಕುಮಾರ್ ಕಾರ್ಕಳ, ಹರಿಶ್ಚಂದ್ರ ಅಮಿನ್ ಕಟಪಾಡಿ, ಶ್ರೀಕುಮಾರ್ ಮೂಡಬಿದ್ರಿ, ನಾರಾಯಣ ಮಚ್ಚಿನ, ನವೀನ್ ಅಮೀನ್ ಉಡುಪಿ, ನವೀನ್ ಸುವರ್ಣ ಸದೀಪ, ನವನೀತ್ ಹಿಂಗಾಣಿ, ಜಯರಾಮ ಬಂಗೇರ, ಜಯರಾಮ ಪೂಜಾರಿ ಬಿಳುವಾಯಿ, ನಾಗೇಶ್ ಪೂಜಾರಿ ಬೈಕಂಪಾಡಿ, ರಾಘವೇಂದ್ರ ಹಾಜರಿದ್ದರು. ಉಪಾಧ್ಯಕ್ಷರ ದೀಪಕ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು.