ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಕುದ್ರೋಳಿ ನವರಾತ್ರಿ ಮಹೋತ್ಸವದಲ್ಲಿ ಸ್ವಯಂ ಸೇವಕರಾಗಿ ಸೇವೆ

0

ಬೆಳ್ತಂಗಡಿ: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಬೆಳ್ತಂಗಡಿ ಯುವವಾಹಿನಿ ಘಟಕದ ಸದಸ್ಯರು ಅ.1ರಂದು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ದೇವರ ಸೇವೆ ಮಾಡಿದರು.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ನೇತೃತ್ವದಲ್ಲಿ ಒಟ್ಟು 85 ಜನ ಯುವವಾಹಿನಿ ಸದಸ್ಯರು ಸ್ವಯಂ ಸೇವಕರಾಗಿ ಭಾಗವಹಿಸಿದರು. ಕ್ಷೇತ್ರದ ವತಿಯಿಂದ ಕೋಶಾಧಿಕಾರಿ ಪದ್ಮರಾಜ್ ಆರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ಘಟಕದ ಅಧ್ಯಕ್ಷರನ್ನು ಅನುಗ್ರಹ ಪತ್ರವನ್ನು ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಘಟಕದಿಂದ ಅನ್ನದಾನಕ್ಕೆ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯುವ ನಾಯಕ ರಕ್ಷಿತ್ ಶಿವರಾಂ ರವರು ಇಡೀ ದಿನ ಘಟಕದೊಂದಿಗೆ ಸ್ವಯಂ ಸೇವೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಬೆಳ್ತಂಗಡಿಯಿಂದ ಕುದ್ರೋಳಿಗೆ ತೆರಳಲು ಬಸ್ಸಿನ ವ್ಯವಸ್ಥೆಯನ್ನೂ ಮಾಡಿದರು.

ಘಟಕದ ಸದಸ್ಯರು ಕ್ಷೇತ್ರದಲ್ಲಿ ಸೇವಕೌಂಟರ್, ಪ್ರಸಾದ ಪ್ಯಾಕಿಂಗ್, ಅನ್ನಪ್ರಸಾದ ವಿತರಣೆಯಲ್ಲಿ ಸಹಕರಿಸಿದರು. ಘಟಕದ ಮಾಜಿ ಅಧ್ಯಕ್ಷ ಪ್ರಶಾಂತ್ ಮಚ್ಚಿನ, ಎಂ.ಕೆ. ಪ್ರಸಾದ್, ಸುಜಾತ ಅಣ್ಣಿ ಪೂಜಾರಿ, ಸದಾಶಿವ ಪೂಜಾರಿ ಊರ, ಮಹಿಳಾ ಸಂಚಾಲನ ಸಮಿತಿ ಪ್ರಧಾನ ಸಂಚಾಲಕಿ ಲೀಲಾವತಿ ಪನಕಜೆ, ಘಟಕದ ಉಪಾಧ್ಯಕ್ಷ ಸಂತೋಷ್ ಸಾಲಿಯಾನ್ ಅರಳಿ, ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಆದೆಲು, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಮೇಲಂತಬೆಟ್ಟು, ಜಯಶ್ರೀ ಕಿಲ್ಲೂರು, ಶೈಲೇಶ್ ಹಾಗೂ ಘಟಕದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here