ತೋಟತ್ತಾಡಿ: ಧರ್ಮರಕ್ಷಾ ವೇದಿಕೆಯ ಆಶ್ರಯದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಸೆ. 29ರಂದು ಬೆಂದ್ರಾಳ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ SNDP ಶಾಖೆ ನಡೆಯಿತು. ಬೆಳಿಗ್ಗೆ 8ಗಂಟೆಗೆ ವೇದಮೂರ್ತಿ ಶ್ರೀ ವಾದಿರಾಜ ಶಬರಾಯ ಉಜಿರೆ ಅವರ ಪೌರೋಹಿತ್ಯದಲ್ಲಿ, “ಗಣಹೋಮ ಹಾಗೂ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ”. ತದನಂತರ ಆಹ್ವಾನಿತ ವಿವಿಧ ಭಜನಾ ತಂಡಗಳಿಂದ ಭಜನೆ, ನಂತರ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಕ್ಸೆಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಜ್ವಲ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಾ ಧಾರ್ಮಿಕ ಆಚರಣೆಗಳು ಸನಾತನ ಸಂಸ್ಕೃತಿಯ ಪ್ರತೀಕ, ಮತ್ತು ನಾವು ದಿನನಿತ್ಯದ ಬದುಕಿನಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು, ನಾಗರಿಕ ಶಿಷ್ಟಾಚಾರಗಳನ್ನು ಪಾಲಿಸಬೇಕು ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದರು.


ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ಶಾರದಾ ಪೂಜೋತ್ಸವವು ಶ್ರೀ ಶಾರದಾ ದೇವಿಯು ವಿದ್ಯೆ,ಸಮೃದ್ಧಿಯ ಸಂಕೇತ, ನವರಾತ್ರಿ ಆಚರಣೆಯು ಯುವ ಸಮಾಜವನ್ನು ಸಂಘಟಿತರನ್ನಾಗಿ ಮಾಡುತ್ತದೆ ಎಂದರು. ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ. ಇರ್ವತ್ರಾಯ, ನವರಾತ್ರಿ ಆಚರಣೆಯ ಮಹತ್ವ ವಿವರಿಸಿದರು. ಕಾರ್ಯಕ್ರಮದಲ್ಲಿ ಚಾರ್ಮಾಡಿ ಗ್ರಾ. ಪಂ. ಅಧ್ಯಕ್ಷೆ ಶಾರದಾ ಎ., ನಾರಾಯಣ ಗುರು ಎಸ್.ಎನ್.ಡಿ.ಪಿ ಸಂಘದ ಅಧ್ಯಕ್ಷ ಸುರೇಶ್ ಎಂ.ಎನ್., ತೋಟತ್ತಾಡಿ ಧರ್ಮರಕ್ಷಾ ವೇದಿಕೆ ಅಧ್ಯಕ್ಷ ಪ್ರಸಾದ್ ಮಡಿಯೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮದ್ಯಾಹ್ನ “ಮಹಾಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ” ಮಧ್ಯಾಹ್ನ 2ರಿಂದ ವಿವಿಧ ಆಹ್ವಾನಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಮಹಾಪೂಜೆ, ನಂತರ
ಶ್ರೀ ಶಾರದಾ ದೇವಿ ಮೂರ್ತಿಯ ವೈಭವಯುತ ಶೋಭಾಯಾತ್ರೆ ನಡೆಯಿತು.